HEALTH TIPS

ಜನಸಂದಣಿ ಮತ್ತು ಪ್ರದರ್ಶನಗಳಿಗೆ ಅನುಮತಿ ಇಲ್ಲ-ಅಂಗಡಿಗಳನ್ನು ನಿಯಂತ್ರಿಸಲು ಸರ್ಕಾರದಿಂದ ಓಣಂ ಮಾರ್ಗಸೂಚಿ

 

     ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಣಂ ಆಚರಣೆಗೆ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂಗಡಿಗಳು ಮತ್ತು ಮಾರುಕಟ್ಟೆಗಳ ಪ್ರಾರಂಭದ ಸಮಯಕ್ಕೆ ನಿಬರ್ಂಧಗಳನ್ನು ವಿಧಿಸಲಾಯಿತು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.

      ಓಣಂಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿ ಅಥವಾ ಮಾರುಕಟ್ಟೆಗಳಲ್ಲಿ ಜನಸಂದಣಿ ಇರಬಾರದು. ಪ್ರದರ್ಶನಗಳು ಮತ್ತು ಮೇಳಗಳನ್ನು ಅನುಮತಿಸಲಾಗುವುದಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಕ್ರಮಗಳ ಜಾರಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ತುರ್ತು ಸಭೆ ಕರೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

        ಕೋವಿಡ್ ನಿಬಂಧನೆಯನ್ನು ಅನುಸರಿಸಿ ಅಂಗಡಿಗಳು ತೆರೆದಿರಬೇಕು. ಕೋವಿಡ್ ಹೆಚ್ಚು ಹರಡುವ ಪ್ರದೇಶಗಳ ಹೊರಗೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ವ್ಯವಹಾರಗಳು ನಡೆಸಬಹುದು. ಅಂಗಡಿಗಳ ವಿಸ್ತಾರತೆಗೆ ಅನುಗುಣವಾಗಿ ಜನರನ್ನು ಒಳ ಪ್ರವೇಶಿಸಲು ಅನುಮತಿಸಬೇಕು. ವ್ಯಾಪಾರಿಗಳು ಈ ಸೂಚನೆಯನ್ನು ಅಂಗಡಿಯ ಹೊರಗೆ ಪ್ರದರ್ಶಿಸಬೇಕು. ಉದ್ಯೋಗಿಗಳು, ದೊಡ್ಡ್ ವ್ಯಾಪಾರಿಗಳಿಗೆ ಮಾಸ್ಕ್ ಕಡ್ಡಾಯವಾಗಿದೆ. ಸ್ಯಾನಿಟೈಜರ್ ಅನ್ನು ಅಂಗಡಿಯ ಬಾಗಿಲಲ್ಲಿ ಇಡಬೇಕು.

        ಓಣಂ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಡಿಮೆ ಇರುವ ಪ್ರದೇಶಗಳಲ್ಲಿ ಸಾರ್ವಜನಿಕ ಮಾರುಕಟ್ಟೆಗಳನ್ನು ಸ್ಥಾಪಿಸಬೇಕು. ಕಚೇರಿಗಳಲ್ಲಿ ಹೂವುಗಳನ್ನು ಬಳಸದಿರಬೇಕು,  ಇತರ ರಾಜ್ಯಗಳಿಂದ ಹೂವುಗಳನ್ನು ಖರೀದಿಸಬಾರದು. ಭೌತಿಕ ದೂರ ಸೇರಿದಂತೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

       ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಓಣಂ ಆಚರಣೆಯನ್ನು ಮನೆಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಹೂವಿನ ವ್ಯವಸ್ಥೆಗೆ ಆಯಾ ಪ್ರದೇಶಗಳ ಹೂವುಗಳನ್ನು ಮಾತ್ರ ಬಳಸಬೇಕು. ಆಮದು ಮಾಡಿದ ಹೂವುಗಳು ರೋಗ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

       ಓಣಂ ಆಚರಣೆಯ ನಂತರ ಅಂಗಡಿಗಳು ಮತ್ತು ಇತರ ಸ್ಥಳಗಳಲ್ಲಿ ಗ್ರಾಹಕರು ಕಿಕ್ಕಿರಿದು ತುಂಬುವ ಸಾಧ್ಯತೆಯಿದೆ. ಅಂತಹ ಸ್ಥಳಗಳಲ್ಲಿ ಭೌತಿಕ ದೂರವನ್ನು ಕಾಪಾಡಿಕೊಳ್ಳಬೇಕು. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅಂಗಡಿಗಳು ತೆರೆದಿರುತ್ತವೆ. ರೋಗ ಹರಡುವ ಅಪಾಯವನ್ನು ಹೆಚ್ಚಿಸುವ ಚಟುವಟಿಕೆಗಳು ಕೂಡದು. ಈ ಬಗ್ಗೆ ಪೆÇಲೀಸರು ವಿಶೇಷ ಗಮನ ಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗಳಿಗೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries