ಕುಂಬಳೆ: ಸೋಮವಾರ ಮಧ್ಯರಾತ್ರಿ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗ್ಯೆದ ಘಟನೆ ನಡೆದಿದೆ.
ನಾಯ್ಕಾಪಿನ ಭಗವತಿ ಆಯಿಲ್ ಮಿಲ್ ನ ನೌಕರ ಹರೀಶ್ (38)ಹತ್ಯೆಯಾದ ಯುವಕನಾಗಿದ್ದಾನೆ. ರಸ್ತೆಯಲ್ಲಿ ತಲೆಗೆ ಗಂಭೀರ ಗಾಯಗಳೊಂದಿಗೆ ಕಂಡುಬಂದ ಹರೀಶನನ್ನು ಗಮನಿಸಿದ ಪೋಲೀಸರು ಬಳಿಕ ಕಾಸರಗೋಡಿನ ಖಾಸಗೀ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.ಪೋಲೀಸರು ತನಿಖೆ ಕ್ಯೆಗೆತ್ತಿಕೊಂಡಿದ್ದಾರೆ.