HEALTH TIPS

ಆಫ್ರಿಕನ್ ಸ್ವೈನ್ ಫೀವರ್ ನಂತರ ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ!

     ಗುವಾಹಟಿ: ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ  ಹರಡುತ್ತಿರುವುದು ಪತ್ತೆಯಾಗಿದೆ. 

        ಎಲ್ಎಸ್ ಡಿ ಎಂದು ಇದನ್ನು ಗುರುತಿಸಲಾಗಿದ್ದು, ಸರ್ಕಾರದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪಶುವೈದ್ಯರು, ಪಶುವೈದ್ಯಕೀಯ ಚಿಕಿತ್ಸಾಲಯಗಳಿಗೆ, ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ, ಅರಿವು ಮೂಡಿಸುವುದಕ್ಕೆ ತಿಳಿಸಲಾಗಿದೆ. 

      ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಎಲ್ಎಸ್ ಡಿ ಸಮಸ್ಯೆ ಕಾಣಿಸಿಕೊಂಡಿದ್ದು, ಚಾಚರ್, ಕರೀಂಗಂಜ್, ಹೈಲಾಕಂಡಿ ಜಿಲ್ಲೆಗಳಲ್ಲಿ ಈವರೆಗೂ ಹಸುಗಳಲ್ಲಿ ಎಲ್ಎಸ್ ಡಿ ಕಾಣಿಸಿಕೊಂಡಿದೆ. 

     ಸೊಳ್ಳೆ, ರಕ್ತ ಹೀರುವ ಕೀಟಗಳಿಂದಾಗಿ ಈ ರೋಗ ಹರಡಲಿದ್ದು, ಹಸುಗಳಿಂದ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ.  ಹಸುಗಳಿಗೆ ಈ ರೋಗ ಹರಡಿದರೆ ಜ್ವರ ಕಾಣಿಸಿಕೊಳ್ಳುತ್ತದೆ, ನಂತರ ಚರ್ಮ ಬೊಬ್ಬೆ ಬಂದಂತೆ ಊತ ಕಾಣಿಸಿಕೊಳ್ಳುತ್ತದೆ.  ಅಷ್ಟೇ ಅಲ್ಲದೇ ದುಗ್ಧರಸ ಗ್ರಂಥಿಗಳ ಊತವು ಸಹ ಕಾಣಿಸಿಕೊಳ್ಳಲಿದೆ ಎಂದು ಡಾ.ಪ್ರದೀಪ್ ಗೊಗೋಯ್ ಹೇಳಿದ್ದಾರೆ. 

     ಸಾಮಾನ್ಯವಾಗಿ ಈ ರೋಗ ಬಂದ ಹಸುಗಳು ಎರಡರಿಂದ ಮೂರು ವಾರಗಳಲ್ಲಿ ಚೇತರಿಸಿಕೊಳ್ಳುತ್ತವೆ, ಆದರೆ ಹಾಲಿನ ಇಳುವರಿಯೂ ಕಡಿಮೆಯಾಗಲಿದೆ.  ಸಾವಿನ ಪ್ರಮಾಣ 1-5% ಇದೆ ಎಂದು ಡಾ. ಗೊಗೋಯ್ ಹೇಳಿದ್ದಾರೆ. 



 


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

    Below Post Ad

    https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

    HOTEL

    HOTEL
    CENTURY
    Qries