HEALTH TIPS

ಕರ್ನಾಟಕಕ್ಕೆ ತೆರಳಲು ತಡೆ : ತಲಪಾಡಿಯಲ್ಲಿ ಪೋಲೀಸ್ ಲಾಠಿ ಪ್ರಹಾರ

 

          ಮಂಜೇಶ್ವರ: ನ್ಯಾಯಾಲಯದ ಆದೇಶ ಹಾಗು ಕೇಂದ್ರ ಸರ್ಕಾರದ ನಿರ್ದೇಶಗಳಿದ್ದರೂ ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳಲು ಅಡ್ಡಿ ಪಡಿಸಿದ ಪೆÇಲೀಸರ ಕ್ರಮದ ಬಗ್ಗೆ ವಿಚಾರಿಸಲು ಹೋದ ಬಿಜೆಪಿ ಕಾರ್ಯಕರ್ತರ ಮೇಲೆ ಪೆÇಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ನಡೆದಿದೆ. 

     ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳಲು ಪಾಸ್ ಬೇಕೆಂದೂ, ಮಂಜೇಶ್ವರ ಗ್ರಾಮ ಪಂಚಾಯತ್‍ನವರಿಗೆ ತೆರಳಲು ಆಧಾರ್‍ಕಾರ್ಡ್‍ಗಳನ್ನು ಕೇಳಿ ಪ್ರಯಾಣಿಕರನ್ನು ತಲಪಾಡಿಯಲ್ಲಿ ಕೇರಳ ಪೆÇಲೀಸರು ಸತಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಲು ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ತೆರಳಿದಾಗ ಪೆÇಲೀಸರು ಲಾಠಿ ಪ್ರಹಾರ ನಡೆಸಿ ಕೆಲವೇ ಮಂದಿಯ ಗುಂಪನ್ನು ಚದುರಿಸಿದರು. ಲಾಠಿ ಪ್ರಹಾರದಿಂದ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. 

       ಬಿಜೆಪಿ ಮುಖಂಡ, ನ್ಯಾಯವಾದಿ ನವೀನ್‍ರಾಜ್ ಅವರು ಪೋಲೀಸರೊಂದಿಗೆ ಮಾತನಾಡಿ ಕೇಂದ್ರ ಸರಕಾರದ ಮತ್ತು ನ್ಯಾಯಾಲಯದ ಆದೇಶವಿದ್ದರೂ ಪಾಸ್ ಕೇಳುತ್ತಿರುವುದು ಅನ್ಯಾಯ. ಇದು ಜನರ ಮುಕ್ತ ಅವಕಾಶವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಹೇಳಿದ್ದರೂ, ಪೆÇಲೀಸರು ತಮ್ಮ ನಿರ್ಧಾರದಿಂದ ಬದಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜನರಿಗೆ ಮುಕ್ತ ಅವಕಾಶ ಲಭಿಸುವ ತನಕ ಬಿಜೆಪಿ ಹೋರಾಟ ನಡೆಸುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries