ಕೋಝಿಕ್ಕೋಡ್: ಕೋವಿಡ್ ಕರ್ತವ್ಯದಲ್ಲಿ ನಿರತರಾಗಿರುವ ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ವಿಶ್ರಾಂತಿ ನೀಡಲು ಎಸಿ ಸ್ಲೀಪರ್ ಬಸ್‍ಗಳು ಇದೀಗ ಸಿದ್ಧವಾಗಿವೆ. ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯನ್ನು ಪರಿಗಣಿಸಿ ನೌಕರರಿಗೆ ಇಂತಹ ವಿಶ್ರಾಂತಿ ಸೌಲಭ್ಯವನ್ನು ಒದಗಿಸಲಾಗಿದೆ. ಎಸಿ ಸ್ಲೀಪರ್ ಬಸ್ ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಸೋಮವಾರ ಉದ್ಘಾಟಿಸಿದರು.
ಪ್ರಯಾಣಿಕರು ಬರುವಲ್ಲಿವರೆಗೆ ವಿಶ್ರಾಂತಿ ಪಡೆಯಲು ಅಥವಾ ಅಗತ್ಯತೆಗಳನ್ನು ನೋಡಿಕೊಳ್ಳಲು ಕಾಯುತ್ತಿರುವ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ. ಇದರ ಪರಿಣಾಮವಾಗಿ ಅವರು ಅನುಭವಿಸುತ್ತಿರುವ ತೊಂದರೆಗಳ ಆಧಾರದ ಮೇಲೆ ನೌಕರರಿಗೆ ವಿಶ್ರಾಂತಿ ಪಡೆಯಲು ಮತ್ತು ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಆಲೋಚನೆಯೊಂದಿಗೆ ಸಾರಿಗೆ ನಿರ್ದೇಶಕರ ಚಿಂತನೆಯಂತೆ ಇಂತಹದೊಂದು ಯೋಜನೆ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ಜಾರಿಗೆ ಬಂದಿದೆ.
ಅತ್ಯಾಧುನಿಕ ಬಸ್ ಗಳನ್ನು ಕೆಎಸ್‍ಆರ್‍ಟಿಸಿಯ ಸ್ವಂತ ಕಾರ್ಯಾಗಾರಗಳಲ್ಲಿ ತಯಾರಿಸಲಾಗುತ್ತದೆ. ಮೊದಲ ಬಸ್ ಕರಿಪ್ಪೂರ್ ವಿಮಾನ ನಿಲ್ದಾಣವನ್ನು ಸೋಮವಾರ ತಲಪಿದೆ. ಈ ಸೌಲಭ್ಯವನ್ನು ಮಂಗಳವಾರ ನೆಡುಂಬಾಸ್ಸೆರಿಯಲ್ಲೂ ಓಣಂ ಮೊದಲು ತಿರುವನಂತಪುರದಲ್ಲೂ ಜಾರಿಗೊಳಿಸಲಾಗುತ್ತದೆ.
16 ಜನರಿಗೆ ವಿಶ್ರಾಂತಿ ಪಡೆಯಲು ಎರಡು ಹಂತದ ಮೆತ್ತನೆಯ ಬರ್ತ್ ಗಳು, ಒಂದು ಸಮಯದಲ್ಲಿ ನಾಲ್ಕು ಜನರಿಗೆ ಮಡಚಬಹುದಾದ ಟೇಬಲ್ ನಾಲ್ಕು, 16 ಲಾಕರ್‍ಗಳು, ಎಸಿ ಮತ್ತು ಫ್ಯಾನ್‍ಗಳಿಗೆ ಆಸನ. 325 ಲೀಟರ್ ವಾಟರ್ ಟ್ಯಾಂಕ್. ತ್ಯಾಜ್ಯ ವಿಲೇವಾರಿ ಸ್ಥಳ ಮತ್ತು ತ್ಯಾಜ್ಯನೀರಿನ ಸಂಗ್ರಹ ವ್ಯವಸ್ಥೆ. ಸ್ಲೀಪರ್ ಬಸ್‍ನಲ್ಲಿ ಮೊಬೈಲ್ ಚಾಜಿರ್ಂಗ್ ಸೌಲಭ್ಯ, ಸಂವೇದಕ ಮಾದರಿಯ ನೈರ್ಮಲ್ಯ ಯಂತ್ರ ಮತ್ತು ಬೆರ್ತ್‍ಗಳನ್ನು ಬೇರ್ಪಡಿಸುವ ಪರದೆಗಳಿವೆ.



