HEALTH TIPS

ಕೋವಿಡ್ ಗೆ ಪರಿಣಾಮಕಾರಿಯಾದ ಆಂಟಿ-ಫೈಬ್ರೊಟಿಕ್ ಔಷಧಗಳು- ಸೇನೆ

          ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಆಂಟಿ ಫೈಬ್ರೊಟಿಕ್ ಓಷಧಗಳನ್ನು ಕೋವಿಡ್-19 ಸಂಬಂಧಿತ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ನೆರವಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಸೇನೆ ಹೇಳಿದೆ.

         ಪುಣೆ ಮೂಲದ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊಥೊರಾಸಿಕ್ ಸೈನ್ಸ್  ( ಎಐಸಿಟಿಎಸ್ ) ಸಂಶೋಧಕರು ಈ ಔಷಧ ಬಹಳ  ಪರಿಣಾಮಕಾರಿ ಎಂಬುದನ್ನು  ಪತ್ತೆ ಹಚ್ಚಿದ್ದಾರೆ. ರೋಗಿಗಳು ಸುರಕ್ಷಿತವಾಗಿ ಈ ಔಷಧವನ್ನು ಬಳಸಬಹುದಾಗಿದೆ. ಕೋವಿಡ್-19 ರೋಗಿಗಳು ಶ್ವಾಸಕೋಶ ತೊಂದರೆಯಿಂದ ಬಳಲುವುದನ್ನು ಈ ಔಷಧ ತಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

        ಈ ಔಷಧದಿಂದ ಬೇಗನೆ ರೋಗಿಗಳು ಗುಣಮುಖರಾಗಲಿದ್ದಾರೆ. ಈ ಔಷಧದಿಂದ ರೋಗಿಗಳು ಲಾಭ ಪಡೆದುಕೊಳ್ಳುವಂತಾಗಲು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಶ್ವಾಸಕೋಶದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿದ್ದ ನಾಲ್ವರು
ರೋಗಿಗಳಿಗೆ ಈ ಔಷಧ ನೀಡಿದ್ದ ಬಳಿಕ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries