HEALTH TIPS

ಒಂದು ಹಳೆಯ ಟಿವಿ ಯಿಂದ ಇಡೀ ಗ್ರಾಮದ ಬ್ರಾಡ್ ಬ್ಯಾಂಡ್ ವ್ಯವಸ್ಥೆಯೇ 18 ತಿಂಗಳು ಅಸ್ತವ್ಯಸ್ತ!

         ವೇಲ್ಸ್:     ಒಂದು ಹಳೆಯ ಟಿ.ವಿಯಿಂದಾಗಿ ಇಡೀ ಗ್ರಾಮವೊಂದರ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಬರೊಬ್ಬರಿ 18 ತಿಂಗಳವರೆಗೆ ಅಸ್ತವ್ಯಸ್ತಗೊಂಡಿದ್ದ ಘಟನೆ ವೇಲ್ಸ್ ನ ಅಬರ್ಹೋಸನ್ ಪ್ರಾಂತ್ಯದ ಪೊವಿಸ್ ನಲ್ಲಿ ನಡೆದಿದೆ. 

      ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ಬಂದಿದ್ದ ಇಂಜಿನಿಯರ್ ಗಳಿಗೂ ಇದು ತಲೆನೋವಾಗಿ ಪರಿಣಮಿಸಿತ್ತು. 

     ಕೇಬಲ್ ಸಮಸ್ಯೆ ಇದ್ದಿರಬಹುದೆಂದು ಕೇಬಲ್ ನ್ನು ಬದಲಾಯಿಸುವ ಯೋಜನೆಯನ್ನು ಪೂರ್ಣಗೊಳಿಸಿದ ಬಳಿಕವೂ ಸಹ ಇದೇ ಸಮಸ್ಯೆ ಮುಂದುವರೆದಿದ್ದು ಇಂಜಿನಿಯರ್ ಗಳಿಗೆ ಈ ಸಮಸ್ಯೆ ಮತ್ತಷ್ಟು ಜಟಿಲಗೊಂಡಿತ್ತು. 

      ಸತತ ಪರಿಶ್ರಮದ ನಂತರ ಸ್ಪೆಕ್ಟ್ರಮ್ ಅನಲೈಸರ್ ಎಂಬ ಮಾನಿಟರ್ ಯಂತ್ರದ ಸಹಾಯದಿಂದ ಸಮಸ್ಯೆ ಏನೆಂಬುದನ್ನು ಕಂಡುಕೊಳ್ಳಲು ಯತ್ನಿಸಿದಾಗ ಹಳೆಯ ಟಿ.ವಿಯೊಂದರಿಂದ ಹೊರಬರುತ್ತಿದ್ದ ಎಲೆಕ್ಟ್ರಿಕಲ್ ಸಿಗ್ನಲ್ ಈ ಬ್ರಾಡ್ ಬ್ಯಾಂಡ್ ಗೆ ಅಡ್ಡಿಯಾಗಿ ಇಡೀ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳುತ್ತಿತ್ತು. ಹಾಗೂ ಈ ಹಳೆಯ ಟಿ.ವಿ ಬಳಕೆ ಮಾಡುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ 7 ಕ್ಕೆ ಟಿ.ವಿ ಚಾಲೂ ಮಾಡುತ್ತಿದ್ದರಿಂದ ಅದೇ ಸಮಯದಲ್ಲಿ ಬ್ರಾಡ್ ಬ್ಯಾಂಡ್ ಕೈಕೊಡುತ್ತಿತ್ತು.

      ಈ ಘಟನೆಯಿಂದ ಮುಜುಗರಕ್ಕೊಳಗಾದ ಟಿ.ವಿಯ ಮಾಲಿಕ ಇನ್ನೆಂದಿಗೂ ಆ ಟಿ.ವಿಯನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಟಿವಿಯಿಂದ ಸಿಂಗಲ್-ಹೈ ಲೆವೆಲ್ ಇಂಪಲ್ಸ್ ನಾಯ್ಸ್ (SHINE) ಹೊರಬರುತ್ತಿತ್ತು. ಇದು ಬೇರೆ ಡಿವೈಸ್ ಗಳಿಗೆ ಎಲೆಕ್ಟ್ರಿಕಲ್ ಇಂಟರ್ಫರೆನ್ಸ್ ನ್ನು ಉಂಟುಮಾಡುತ್ತಿತ್ತು ಎಂದು ಇಂಜಿನಿಯರ್ ಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries