HEALTH TIPS

ಫೇಸ್‍ಬುಕ್ ಚಾಟ್‍ನಲ್ಲಿ 18 ರ ಹರೆಯದ ಗೆಳತಿಯನ್ನು ಭೇಟಿಯಾಗಲು ಬಂದ ಯುವಕ ಯುವತಿಯನ್ನು ಕಂಡು ಬೆಚ್ಚಿಬಿದ್ದ!-ಸಿಕ್ಕಿದ್ದು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಕೇಸ್


         ಕಾಸರಗೋಡು: ಫೇಸ್‍ಬುಕ್‍ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಆಗಮಿಸಿದ ಯುವಕನೋರ್ವ ಗೆಳತಿಯನ್ನು ಕಂಡು ಹೌಹಾರಿ, ಬಳಿಕ ಚಾಕೆಸೆದ ಘಟನೆ ನಾಟಕೀಯ ವಿದ್ಯಮಾನಗಳೊಂದಿಗೆ ನಡೆದಿದೆ.

         ಪೇಸ್ ಬುಕ್ ಮೂಲಕ ಸ್ನೇಹಿತೆಯಾದ ಯುವತಿಯನ್ನು ಭೇಟಿಯಾಗಲು ಬಯಸಿದ ತ್ರಿಶೂರ್‍ನ ಯುವಕನೊಬ್ಬ ಬೇಕಲ ಕೋಟೆಗೆ ಭಾನುವಾರ ಆಗಮಿಸಿದ್ದ. ತನ್ನ ಸ್ನೇಹಿತನೊಂದಿಗೆ ತ್ರಿಶೂರ್‍ನಿಂದ ಬೇಕಲ ಕೋಟೆಗೆ ಬೈಕ್‍ನಲ್ಲಿ ಬಂದಿದ್ದು ತನ್ನ ಗೆಳತಿಯನ್ನು ನೋಡಿ ಆಘಾತಗೊಂಡನು. ನಿರಾಶೆಗೊಂಡ ರಿಜೋಯ್ (28) ಆಕೆಯ ಮೇಲೆ ಚಾಕು ಎಸೆದನು. ಬಳಿಕ ಸಾರ್ವಜನಿಕರು ಪೋಲೀಸರು ಆಗಮಿಸಿದರು. 

          18 ವರ್ಷದ ಯುವತಿ 50ರ ಹರೆಯದ ಗೃಹಿಣಿಯೆಂದು ತಿಳಿದು ನಿರಾಶೆಗೊಂಡ ರಿಜೋಯ್ ಅವಕ್ಕಾಗಿದ್ದು, ಬೈಕೊಳಗಿದ್ದ ಚಾಕುವನ್ನು ಮಹಿಳೆಯತ್ತ ಎಸೆದನು. ಘಟನೆಗೆ ಸಾಕ್ಷಿಯಾದ ಸ್ಥಳೀಯರು ಈ ಬಗ್ಗೆ ಮಾಹಿತಿ ಪಡೆದು ಬಳಿಕ ಬೇಕಲ್ ಪೆÇಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲುಪಿದ ಪೋಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಕಥಾನಕ ತೆರೆದುಕೊಂಡಿತು.

         ತ್ರಿಶೂರ್‍ನ ಯುವಕ ಮತ್ತು ಆತನ ಸ್ನೇಹಿತ ಭಾನುವಾರ ಮಧ್ಯಾಹ್ನ ಬೈಕ್ ಮೂಲಕ ಬೇಕಲ್ ಕೋಟೆಗೆ ತಲುಪಿದರು. ಸ್ವಲ್ಪ ಸಮಯದ ಬಳಿಕ ಉಪ್ಪಳದ 50 ರ ಹರೆಯದ ಮಹಿಳೆ ಬುರ್ಖಾಧಾರಿಯಾಗಿ ಆಗಮಿಸಿದರು. ರಿಜೋಯ್ ಈ ಸಂದರ್ಭ ಯುವತಿಯೆಂದು ನಂಬಿದ್ದಾಕೆಯ ಮುಖವನ್ನು ನೋಡಬೇಕೆಂದು ಒತ್ತಾಯಿಸಿದ್ದು, ಆದರೆ ಅವಳು ಮೊದಲು ನಿರಾಕರಿಸಿದಳು. ಅಂತಿಮವಾಗಿ ತನ್ನ ಗೆಳತಿ ತನಗೆ ಮೋಸ ಮಾಡಿದ್ದಾಳೆ ಎಂದು ಖಚಿತಪಟ್ಟಾಗ  ರಿಜೋಯ್ ಚಾಟಿಂಗ್ ಸಮಯದಲ್ಲಿ ಗೂಗಲ್ ಪೇ ಮೂಲಕ ಆಗಾಗ್ಗೆ ಕಳುಹಿಸಿದ್ದ ಸುಮಾರು ಅರ್ಧ ಲಕ್ಷ ರೂಪಾಯಿಗಳನ್ನು ಮರುಪಾವತಿಸುವಂತೆ ಒತ್ತಾಯಿಸಿದನು.

        ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಮಹಿಳೆ ತಿಳಿಸಿದ್ದು ಇದರಿಂದ ಕುಪಿತನಾದ ರಿಜಾಯ್ ಬೈಕ್‍ನ ಚೀಲದಲ್ಲಿ ಇಟ್ಟುಕೊಂಡಿದ್ದ ಚಾಕುವನ್ನು ಹೊರತೆಗೆದು ಎಸೆದನು. ಇಬ್ಬರನ್ನು ಪೆÇಲೀಸ್ ಠಾಣೆಗೆ ಕರೆದೊಯ್ದು ನಡೆಸಿದ ಸಂಧಾನದಲ್ಲಿ ಪಡೆದ 50,000 ರೂಗಳಲ್ಲಿ ಗೃಹಿಣಿ ತನ್ನ ಗೆಳೆಯನಿಗೆ 25 ಸಾವಿರ ರೂ. ನೀಡಲು ಸೂಚಿಸಲಾಯಿತು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ಪ್ರಚೋದಿಸಿದ್ದಕ್ಕಾಗಿ ಬೇಕಲ ಪೆÇಲೀಸರು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ತ್ರಿಶೂರ್ ಯುವಕನ ವಿರುದ್ಧ ಪ್ರಕರಣವನ್ನೂ ದಾಖಲಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries