HEALTH TIPS

ರಾಜ್ಯದಲ್ಲಿಂದು 2540 ಕೊರೊನಾ ಸೋಂಕು ಬಾಧಿತರು ದೃಢ-2110 ಮಂದಿ ಗುಣಮುಖ

ತಿರುವನಂತಪುರ: ರಾಜ್ಯದಲ್ಲಿ ಇಂದು 2540 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. 2110 ಮಂದಿ ಗುಣಮುಖರಾಗಿರುವರು. ಕೋವಿಡ್ ಪಾಸಿಟಿವ್ ಜಿಲ್ಲಾವಾರು ವಿವರ: ಮಲಪ್ಪುರಂ ಜಿಲ್ಲೆಯಲ್ಲಿ ಕೇರಳದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಇಂದು ದಾಖಲಾಗಿವೆ. ತಿರುವನಂತಪುರ 332, ಮಲಪ್ಪುರಂ 482 ಕೊಲ್ಲಂ 142, ಎರ್ನಾಕುಳಂ 255, ಕೋಝಿಕ್ಕೋಡ್ 382, ಕಣ್ಣೂರು 232, ಕೊಟ್ಟಾಯಂ 122, ಆಲಪ್ಪುಳ 107, ತ್ರಿಶೂರ್ 181, ಪಾಲಕ್ಕಾಡ್ 175, ಕಾಸರಗೋಡು 56, ಪತ್ತನಂತಿಟ್ಟು 16, ವಯನಾಡ್ 20, ಇಡುಕ್ಕಿ 58 ಮಂದಿಗಳಲ್ಲಿ ಕೋವಿಡ್ ದೃಢಪಡಿಸಲಾಗಿದೆ. . 15 ಕೋವಿಡ್ ಮರಣ: ರಾಜ್ಯದಲ್ಲಿ ಇಂದು 15 ಮಂದಿಗಳ ಮರಣವನ್ನು ಕೋವಿಡ್ ಕಾರಣದಿಂದ ಎಂದು ದೃಢಪಡಿಸಲಾಗಿದೆ. ಮಲಪ್ಪುರಂ ತಾಳಕ್ಕೋಟ ನಿವಾಸಿ ಜೋರ್ಜ್(62),ಪಾಲಕ್ಕಾಡ್ ನ ಗಂಗಾಧರನ್(65), ಮಲಪ್ಪುರಂ ನ ಆಯಿಷಾ(60), ಕೊಲ್ಲಂ ಕೊಟ್ಟಾರಕ್ಕರದ ಬಾಬುರಾಜನ್(56), ಕೊಲ್ಲಂ ಕಿಳಮತ್ತಿಕಡವಿನ ಶಶಿಧರನ್(65), ಪಾಲಕ್ಕಾಡ್ ಕೊಳತ್ತಪ್ಪಾರದ ಕಣ್ಣಪ್ಪನ್(37), ಎರ್ನಾಕುಳಂ ಕಣ್ಣನಾಡ್ ನ ವಿ.ವಿ.ಪೌಲಸ್(79), ಮಲಪ್ಪುರ್ ಇಬ್ರಾಹಿಂ(58), ಕೋಝಿಕ್ಕೋಡ್ ವಡಗರದ ಮುರಳೀಧರನ್(65), ಪಾಲಕ್ಕಾಡ್ದ ಆಲತ್ತೂರಿನ ತಂಗಮಣಿ(65), ತಿರುವನಂತಪುರ ಪೂಜಾಪುರದ ಅಕ್ಷಯ(13), ಕೊಲ್ಲಂ ಶಾಸ್ತಾಕೋಟದ ಅಶೋಕನ್(60), ಕಾಸರಗೋಡು ನೀಲೇಶ್ವರದ ನಾರಾಯಣ ಆಚಾರಿ(68), ತಿರುವನಂತಪುರ ನೆಯ್ಯಾಟಿಂಗರದ ರಾಜನ್(59), ತಿರುವನಂತಪುರ ಚೂಳನಾಡ್ ನ ಸಿಸಿಲಿ(60) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರೆಂದು ಸೋಮವಾರ ಆರೋಗ್ಯ ಇಲಾಖೆ ತಿಳಿಯಪಡಿಸಿದೆ. ರಾಜ್ಯದಲ್ಲಿ ಈ ಮೂಲಕ ಕೋವಿಡ್ ಮರಣದ ಸಂಖ್ಯೆ 454 ಕ್ಕೆ ಏರಿಕೆಯಾಗಿದೆ. ಇಂದು ಬಾಧಿತರಾದವರಲ್ಲಿ 34 ಮಂದಿ ವಿದೇಶದಿಂದ, 73 ಮಂದಿ ಇತರ ರಾಜ್ಯಗಳಿಂದ ಬಂದವರು. 2346 ಮಂದಿಗೆ ಇಂದು ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಈ ಪೈಕಿ 212 ಮಂದಿಗಳ ಸಂಪರ್ಕಮೂಲ ಪತ್ತೆಯಾಗಿಲ್ಲ. ತಿರುವನಂತಪುರ 313, ಕೋಝಿಕ್ಕೋಡ್ 377, ಮಲಪ್ಪುರಂ 457, ಎರ್ನಾಕುಳಂ 214, ಆಲಪ್ಪುಳ 104, ಪಾಲಕ್ಕಾಡ್ 156,. ಕಣ್ಣೂರು 192, ಕೋಟ್ಟಯಂ 121, ಕೊಲ್ಲಂ 130, ತೃಶೂರ್ 155, ಕಾಸರಗೋಡು 49, ಪತ್ತನಂತಿಟ್ಟು 15, ವಯನಾಡ್ 14, ಇಡುಕ್ಕಿ 49 ಎಂಬಂತೆ ಸಂಪರ್ಕ ಮೂಲಕ ಇಂದು ಕೋವಿಡ್ ಬಾಧಿತರಾದವರ ಅಂಕಿಅಂಶಗಳಾಗಿವೆ. ಇಂದು 64 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಉಂಟಾಗಿದೆ. ತಿರುವನಂತಪುರ 16, ಕಣ್ಣೂರು 24, ಕೊಲ್ಲಂ 6, ಎರ್ನಾಕುಳಂ 5, ಮಲಪ್ಪುರಂ 5, ಕಾಸರಗೋಡು 3, ತೃಶೂರ್ 2, ಆಲಪ್ಪುಳ, ವಯನಾಡ್ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಬಾಧಿಸಿದೆ. ಸೋಂಕು ಕಂಡುಬಂದ 2110 ಮಂದಿಗಳ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ. ತಿರುವನಂತಪುರ 415, ಕೊಲ್ಲಂ 165, ಪತ್ತನಂತಿಟ್ಟು 103, ಆಲಪ್ಪುಳ 198, ಕೊಟ್ಟಾಯಂ 121, ಇಡುಕ್ಕಿ 25, ಎರ್ನಾಕುಳಂ 125, ತ್ರಿಶೂರ್ 140, ಪಾಲಕ್ಕಾಡ್ 93, ಮಲಪ್ಪುರಂ 261, ಕೋಝಿಕ್ಕೋಡ್ 123, ವಯನಾಡ್ 76, ಕಣ್ಣೂರು 135 ಮತ್ತು ಕಾಸರಗೋಡು 130 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಇದರೊಂದಿಗೆ 30,486 ಜನರಿಗೆ ಸೋಂಕು ದೃಢಪಡಿಸಲಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 79,813 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. 2,05,158 ಮಂದಿ ರಾಜ್ಯಾದ್ಯಂತ ನಿರೀಕ್ಷಣೆಯಲ್ಲಿದ್ದಾರೆ.22917 ಮಂದಿ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 22,279 ಜೊಲ್ಲು ಸಂಗ್ರಹಗಳನ್ನು ಪರೀಕ್ಷಿಸಲಾಯಿತು. ಈ ವರೆಗೆ 21,52,585 ಮಾದರಿಗಳನ್ನು ಪರಿಶೀಲಿಸಲು ಕಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries