ತಿರುವನಂತಪುರ: ಸಚಿವ ಕೆ.ಟಿ.ಜಲೀಲ್ ಅವರನ್ನು ಎನ್.ಐ.ಎ ವಿಚಾರಣೆ ನಡೆಸಿದ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಯಾರನ್ನೂ ಪ್ರಶ್ನಿಸುವ ಅಧಿಕಾರ ಎನ್ ಐ ಎಗೆ ಇದೆ ಆದರೆ ಪ್ರಸ್ತುತ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ತನಿಖೆಯ ಫಲಿತಾಂಶ ಬರುವವರೆಗೂ ಎಲ್ಲರೂ ತಾಳ್ಮೆಯಿಂದಿರಿ ಎಂದು ರಾಜ್ಯಪಾಲರು ಹೇಳಿರುವರು.
ಎಲ್ಲಕ್ಕಿಂತ ಹೆಚ್ಚಾಗಿ ಕಾನೂನು ಇದೆ ಎಂದು ರಾಜ್ಯಪಾಲರು ಸೂಚಿಸಿದರು. ತನಿಖಾ ಸಂಸ್ಥೆಗಳಿಗೆ ತಮ್ಮ ಕೆಲಸವನ್ನು ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ.ಎನ್.ಐ.ಎ ಕ್ರಮವು ರಾಜಕೀಯ ಪ್ರೇರಿತವಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ಆರಿಫ್ ಮೊಹಮ್ಮದ್ ಖಾನ್ ಅವರು ಈ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಹೇಳಿದರು.
ನಾವು ನಮ್ಮ ಕೆಲಸವನ್ನು ಮಾಡಬೇಕು ಮತ್ತು ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ರಾಜ್ಯಪಾಲರು ಹೇಳಿದರು. 'ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೆಲಸವಿದೆ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸುತ್ತಿದೆ. ನಾವು ಅವರನ್ನು ನಂಬಬೇಕು. ಯಾರನ್ನೂ ಪ್ರಶ್ನಿಸುವ ಅಧಿಕಾರ ಎನ್ ಐ ಎ ಗೆ ಇದೆ. ನೀವು ಎಷ್ಟೇ ಶ್ರೇಷ್ಠರಾಗಿದ್ದರೂ ನೀವು ಕಾನೂನಿಗೆ ಒಳಪಟ್ಟಿರುತ್ತೀರಿ. ' ಅವರು ಬೊಟ್ಟುಮಾಡಿದರು.
"ಸಚಿವರನ್ನು ಏಕೆ ಕರೆಸಲಾಯಿತು ಅಥವಾ ಏನನ್ನು ಕೇಳಲಾಯಿತು ಎಂದು ನಮಗೆ ತಿಳಿದಿಲ್ಲ" ಎಂದು ಅವರು ಹೇಳಿದರು, ಎನ್.ಐ.ಎ ತನಿಖೆ ಕೊನೆಗೊಳ್ಳುವವರೆಗೂ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂದು ಪ್ರಶ್ನೆಗೆ ತೆರೆ ಎಳೆದರು.





