ಕಾಸರಗೋಡು: ಜಿಲ್ಲೆಯಲ್ಲಿ ಇಂದು ಕೋವಿಡ್ 251 ಮಂದಿಗೆ ಖಚಿತಪಡಿಸಲಾಗಿದೆ. ನಾಲ್ಕು ಆರೋಗ್ಯ ಕಾರ್ಯಕರ್ತರು ಸೇರಿದಂತೆ 243 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಜಿಲ್ಲೆಯಲ್ಲಿ 4869 ಜನರು ಕಣ್ಗಾವಲಿನಲ್ಲಿ:
ಜಿಲ್ಲೆಯಲ್ಲಿ ಕಣ್ಗಾವಲಿನಲ್ಲಿರುವ ಒಟ್ಟು ಸಂಖ್ಯೆ 4869 ರಷ್ಟಿದ್ದು, ಈ ಪೈಕಿ ಮನೆಗಳಲ್ಲಿ 3967 ಮತ್ತು ಆರೈಕೆ ಕೇಂದ್ರಗಳಲ್ಲಿ 902 ಜನರಿದ್ದಾರೆ. ಹೊಸದಾಗಿ ಸೇರಿಸಲಾದ 298 ಜನರನ್ನು ಮೇಲ್ವಿಚಾರಣೆ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1475 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 309 ಜನರ ಪರೀಕ್ಷಾ ಫಲಿತಾಂಶಗಳನ್ನು ಪಡೆಯಲು ಬಾಕಿಯಿದೆ. 263 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 280 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 564 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಕೋವಿಡ್ ಬಾಧಿಸಿದ ಇಂದಿನ ಪಂಚಾಯತಿವಾರು ವಿವರ:
ಅಜಾನೂರ್ -21, ಬದಿಯಡ್ಕ-9, ಬಳಾಲ್ -1, ಬೇಡಡ್ಕ -5, ಚೆಮ್ಮನಾಡ್ -15, ಚೆಂಗಳ -6, ಚೆರ್ವತ್ತೂರು -10, ಈಸ್ಟ್ ಎಳೇರಿ -1, ಎಣ್ಮಕಜೆ-12, ಕಳ್ಳಾರ್ -3,
ಕಾಞಂಗಾಡ್ -21, ಕಾರಡ್ಕ -6, ಕಾಸರಗೋಡು -19, ಕೈಯೂರ್ ಚೀಮೆನಿ -1, ಕಿನಾನೂರ್ ಕರಿಂದಳಂ -1, ಕೋಡೋ ಬೆಳ್ಳೂರು -9, ಕುಂಬ್ಡಾಜೆ -1, ಕುಂಬಳೆ -4,
ಮಧೂರು -5, ಕುತ್ತಿಕೋಲ್ -7, ಮಂಗಲ್ಪಾಡಿ -2, ಮೊಗ್ರಾಲ್ ಪುತ್ತೂರ್ -6, ಮುಳಿಯಾರ್ -3, ನೀಲೇಶ್ವರ -14, ಪೈವಳಿಕೆ -3, ಪಳ್ಳಿಕ್ಕೆರೆ -8, ಪನತ್ತಡಿ -6, ಪಿಲಿಕೋಡ್ -5, ಪುಲ್ಲೂರ್ ಪೆರಿಯಾ -17, ಪುತ್ತಿಗೆ -5, ತ್ರಿಕ್ಕರಿಪುರ -16, ಉದುಮ-7, ವಲಿಯಪರಂಬ -1, ವರ್ಕಾಡಿ -1,
ಇಂದು, 228 ಜನರಿಗೆ ಸೋಂಕು ನಕಾರಾತ್ಮಕವಾಗಿದೆ
ಇಂದು ಕೋವಿಡ್ ಚಿಕಿತ್ಸೆಗೆ ಒಳಗಾದ 228 ಜನರನ್ನು ಗುಣಪಡಿಸಲಾಗಿದೆ ಎಂದು ಡಿಎಂಒ ತಿಳಿಸಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 13458 ಕ್ಕೆ ಏರಿಕೆಯಾಗಿ ಸಮಾಧಾನ ನೀಡಿದೆ.
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು- ಎಚ್ಚರಿಕೆ ಅಗತ್ಯ:
ಕೋವಿಡ್ ಹರಡುವಿಕೆ ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚಳಗೊಳ್ಳುತ್ತಿದೆ.
ಸೂಚನೆಗಳ ಉಲ್ಲಂಘನೆಯನ್ನು ವರದಿ ಮಾಡಬಹುದು:
ಕಾಸರಗೋಡು ಜಿಲ್ಲೆಯ ಎಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ವ್ಯವಹಾರಗಳಲ್ಲಿ ಸೂಚನೆಗಳನ್ನು ಅನುಸರಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಲ್ಲಿ ನೀವು ಮಾಹಿತಿಯನ್ನು ಕಳುಹಿಸಬಹುದಾಗಿದೆ. ಅಥವಾ ವೀಡಿಯೊ ಸಂದೇಶವನ್ನು ವಾಟ್ಸಾಪ್ ಸಂಖ್ಯೆ 8590684023 ಗೆ ಕಳುಹಿಸಬಹುದು.





