ತಿರುವನಂತಪುರ: ಕೋವಿಡ್ -19 ತಡೆಗಟ್ಟುವ ಕ್ರಮಗಳ ಭಾಗವಾಗಿ ಘೋಷಿಸಿದ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದೇಶದಿಂದ ತಾಯ್ನಾಡಿಗೆ ಬಂದು ಮರಳಲು ಸಾಧ್ಯವಾಗದ ವಲಸಿಗರಿಗೆ ಇದುವರೆಗೆ 50 ಕೋಟಿ ರೂ.ನೀಡಲಾಗಿದೆ. ಒಂದು ಲಕ್ಷ ಜನರಿಗೆ ತಲಾ 5,000 ರೂ.ಗಳಂತೆ ವಿತರಣೆ ಮಾಡಲಾಗಿದೆ ಎಂದು ನೋರ್ಕಾ ಮಾಹಿತಿನೀಡಿದೆ.
ಜನವರಿ 1 ರ ಬಳಿಕ ರಜೆಯ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿ ಬಳಿಕ ಲಾಕ್ ಡೌನ್ ನಿಂದ ವಿದೇಶಕ್ಕೆ ಮರಳಲಾಗದವರಿಗಾಗಿ ಸರ್ಕಾರ ನೆರವು ಘೋಶಿಸಿತ್ತು. ಈ ಹಿನ್ನೆಲೆಯಲ್ಲಿ 1.5 ಲಕ್ಷ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಲ್ಲಿಸಿಯೂ ಈವರೆಗೆ ಯಾವ ನೆರವೂ ಬಂದಿಲ್ಲ ಎಂಬ ಆರೋಪಗಳೂ ಕೇಳಿಬಂದಿದೆ. ಈ ಮಧ್ಯೆ, ಅನೇಕರು ಕೊಲ್ಲಿ ರಾಷ್ಟ್ರಗಳಿಗೆ ಮರಳಿದವರೂ ಇದ್ದಾರೆ. ಮೊತ್ತವನ್ನು ಎನ್‍ಆರ್‍ಐ ಖಾತೆ ಸಲ್ಲಿಸುವವರಿಗೆ ವರ್ಗಾಯಿಸಲಾಗಿಲ್ಲ. ಅವರು ನೋರ್ಕಾ ರೀತಿಯಲ್ಲಿ ಹೆಸರು ದಾಖಲಿಸಿ ಸಂಬಂಧಪಟ್ಟವರನ್ನು ಸಂಪರ್ಕಿಸಿದಾಗ ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಅವರಿಗೆ ಸಹಾಯಧನ ಸಿಗಲಿದೆ ಎಂದು ನೋರ್ಕಾ ರೂಟ್ಸ್ ಸಿಇಒ ತಿಳಿಸಿದ್ದಾರೆ.
ಸಾಕಷ್ಟು ದಾಖಲೆಗಳನ್ನು ಸಲ್ಲಿಸದ ಅರ್ಜಿದಾರರು ಅಕ್ಟೋಬರ್ 23 ರವರೆಗೆ ಅರ್ಜಿ ಸಲ್ಲಿಸಬಹುದು. www.norkaroots.org ವೆಬ್‍ಸೈಟ್‍ನಲ್ಲಿರುವ ''covid support'' ಲಿಂಕ್‍ಗೆ ಹೋಗಿ ಸಂಬಂಧಿತ ಆಯ್ಕೆ ಯಲ್ಲಿ ಅಗತ್ಯದ ದಾಖಲೆಗಳನ್ನು ಸಲ್ಲಿಸಬಹುದು ಎಮದು ಸೂಚಿಸಲಾಗಿದೆ.





