HEALTH TIPS

ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಸುಲಭ ಮತ್ತು ತ್ವರಿತವಾಗಿ ಸಿಗುವಂತಾಗಬೇಕು: ಪ್ರಧಾನಿ

          ನವದೆಹಲಿ: ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ತ್ವರಿತವಾಗಿ ಮತ್ತು ಅತ್ಯಂತ ಸುಲಭವಾಗಿ ಸಿಗುವಂತಾಗಬೇಕು. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

        ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿ, ಲಸಿಕೆ ವಿತರಣೆ ಹಾಗೂ ಆಡಳಿತ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹತ್ವದ ಸಭೆ ನಡೆಸಿದರು.

         ಚುನಾವಣೆ ಮತ್ತು ವಿಪತ್ತು ನಿರ್ವಹಣೆ ಮಾಡುವ ರೀತಿಯಲ್ಲೇ ಎಲ್ಲಾ ಹಂತದ ಸರ್ಕಾರಿ ಮತ್ತು ನಾಗರಿಕರನ್ನು ಒಳಗೊಂಡ ಲಸಿಕೆ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚಿಸಿದ್ದಾರೆ.

      ದೈನಂದಿನ ಕೋವಿಡ್ ಪ್ರಕರಣಗಳ ಕುಸಿತ ಮತ್ತು ಚೇತರಿಕೆ ಪ್ರಮಾಣ ಹೆಚ್ಚಳವನ್ನು ಗಮನಿಸಿದ ಪ್ರಧಾನಿ, ಸಾಂಕ್ರಾಮಿಕ ರೋಗನ್ನು ತಡೆಗಟ್ಟುವ ಪ್ರಯತ್ನಗಳನ್ನು ಮುಂದುವರಿಸಬೇಕೆಂದು ಕರೆ ನೀಡಿದರು.

      ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಮನದಲ್ಲಿಟ್ಟುಕೊಂಡು, ಆಯಾ ರಾಜ್ಯಗಳಿಗೆ ಲಸಿಕೆ ವಿತರಣೆಯಾಗಬೇಕು. ಲಾಜಿಸ್ಟಿಕ್, ವಿತರಣೆ, ಆಡಳಿತ ಸೇರಿದಂತೆ ಪ್ರತಿಯೊಂದ ಹಂತದಲ್ಲಿ ಯಾವುದೇ ಲೋಪವಾಗದಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಬೇಕು ಎಂದು ಪ್ರಧಾನಿ ಹೇಳಿದರು.

       ಕೋಲ್ಡ್ ಸ್ಟೋರೇಜ್ ಸುಧಾರಿತ ಯೋಜನೆ, ವಿತರಣಾ ಜಾಲ, ಮೇಲ್ವಿಚಾರಣಾ ಕಾರ್ಯವಿಧಾನ, ಮುಂಗಡ ಮೌಲ್ಯಮಾಪನ ಮತ್ತು ಅಗತ್ಯವಿರುವ ಪೂರಕ ಸಾಧನಗಳಾದ ವೈಲ್ಸ್, ಸಿರಿಂಜ್ ಇತ್ಯಾದಿಗಳನ್ನು ತಯಾರಿಸುವ ಹಾಗೂ ವಿತರಿಸುವ ಜಾಲ ಸಮರ್ಪಕವಾಗಿರಬೇಕು ಎಂದು ಮೋದಿ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries