ಕಾಸರಗೋಡು: ಜಿಲ್ಲೆಯಲ್ಲಿ ಇಂದು 280 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಆರು ಆರೋಗ್ಯ ಕಾರ್ಯಕರ್ತರು ಸೇರಿದಂತೆ 276 ಮಂದಿಗೆ ಸಂಪರ್ಕದಿಂದ ಸೋಂಕು ಉಂಟಾಗಿದ್ದು ಪ್ರಸ್ತುತ, 2992 ಜನರು ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ 4834 ಮಂದಿ ಕ್ವಾರಂಟೈನ್ ನಲ್ಲಿ!:
ಜಿಲ್ಲೆಯಲ್ಲಿ ಒಟ್ಟು 4834 ಮಂದಿ ಕ್ವಾರಂಟೈನ್ ನಲ್ಲಿರುವರು. ಇದರಲ್ಲಿ ಮನೆಗಳಲ್ಲಿ 3807 ಮತ್ತು ವಿವಿಧ ಆರೈಕೆ ಕೇಂದ್ರಗಳಲ್ಲಿ 1027 ಮಂದಿಯಿದ್ದಾರೆ. ಇಂದು 179 ಜನರನ್ನು ಹೊಸದಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಇನ್ನೂ 1491 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 365 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಲಭ್ಯವಾಗಲು ಬಾಕಿಯಿದೆ. 299 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 234 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 328 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
564 ಜನರಿಗೆ ಕೋವಿಡ್ ಋಣಾತ್ಮಕ:
ಕೋವಿಡ್ ಚಿಕಿತ್ಸೆಗೆ ಒಳಗಾಗಿರುವ 564 ಜನರಿಗೆ ಕೋವಿಡ್ ಋಣಾತ್ಮಕವಾಗಿದೆ ಎಂದು ಡಿಎಂಒ ಡಾ ಎ.ವಿ. ರಾಮದಾಸ್ ಇಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್ ಸಾವುಗಳು:
ಆರೋಗ್ಯ ಇಲಾಖೆಯು ಇಬ್ಬರು ವ್ಯಕ್ತಿಗಳು ಕೊವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ಘೋಶಿಸಿದೆ. ಇದರಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 152 ಕ್ಕೆ ಏರಿಕೆಯಾಗಿದೆ. ಕಾಞಂಗಾಡ್ ನಗರಸಭೆ ನಿವಾಸಿ ಕಮಲಾಕ್ಷ (4) ಮತ್ತು ಕಳ್ಳಾರ್ ಪಂಚಾಯತ್ ನ ಕುಂಞಂಬು ನಾಯರ್ (74) ಅವರ ಸಾವನ್ನು ಕೋವಿಡ್ ನಿಂದ ಎಮದು ದೃಢಪಡಿಸಲಾಗಿದೆ.
ಕೋವಿಡ್ ಸಕಾರಾತ್ಮಕವಾದ ಪಂಚಾಯತಿವಾರು ಮಾಹಿತಿ:
ಅಜಾನೂರು- 25, ಬದಿಯಡ್ಕ- 9, ಬಳಾಲ್ -10, ಬೇಡಡ್ಕ -10, ಚೆಮ್ಮನಾಡ್- 22, ಚೆಂಗಳ- 11, ಚೆರ್ವತೂರ್- 10, ಈಸ್ಟ್ ಎಳೇರಿ -3, ಎಣ್ಮಕಜೆ -2, ಕಳ್ಳಾರ್ -2, ಕಾಞಂಗಾಡ್ -34, ಕಾರಡ್ಕ-4, ಕಾಸರಗೋಡು-20, ಕೈಯ್ಯೂರು-ಚೀಮೇನಿ-6, ಕಿನಾನೂರ್ ಕರಿಂದಳಂ- 5, ಕೋಡೋಂ ಬೆಳ್ಳೂರ್-5, ಕುಂಬ್ಡಾಜೆ-1, ಕುಂಬಳೆ- 5, ಕುತ್ತಿಕೋಲ್-3, ಮಧೂರು-14, ಮಡಿಕೈ-14, ಮಂಗಲ್ಪಾಡಿ -2, ಮಂಜೇಶ್ವರ -1, ಮೊಗ್ರಾಲ್ ಪುತ್ತೂರ್ -4, ಮುಳಿಯಾರ್ -6, ನಿಲೇಶ್ವರ -5, ಪಡನ್ನ -3, ಪಳ್ಳಿಕ್ಕೆರೆ -8, ಪಿಲಿಕೋಡ್ -5, ಪುಲ್ಲೂರ್ ಪೆರಿಯಾ -8, ತ್ರಿಕ್ಕರಿಪುರ -2, ಉದುಮ -8, ವಲಿಯಪರಂಬ -8, ವೆಸ್ಟ್ ಎಳೇರಿ -3, ಇತರ ಜಿಲ್ಲೆಗಳು: ಪೆರಿಂಗೋಮ್ -1, ಉದಯನಪುರಂ -1 ಎಂಬಂತೆ ಸೋಂಕು ಬಾಧಿಸಿದೆ.
ಕೋವಿಡ್ ನೆಗೆಟಿವ್ ವಿವರ:
ಅಜಾನೂರ್- 49, ಬದಿಯಡ್ಕ- 8, ಬಳಾಲ್- 4, ಬೇಡಡ್ಕ -11, ಚೆಮ್ಮನಾಡ್- 30, ಚೆಂಗಳ-21, ಚೆರ್ವತೂರ್ -14, ದೇಲಂಪಾಡಿ -2, ಈಸ್ಟ್ ಎಳೇರಿ -3, ಎಣ್ಮಕಜೆ-7,
ಕಳ್ಳಾರ್ -14, ಕಾಞಂಗಾಡ್-49, ಕಾರಡ್ಕ -3, ಕಾಸರಗೋಡು-37, ಕೈಯೂರ್ ಚೀಮೆನಿ -10, ಕಿನಾನೂರ್ ಕರಿಂದಳಂ -10, ಕೋಡೋಂ ಬೆಳ್ಳೂರ್-4, ಕುಂಬ್ಡಾಜೆ -5, ಕುಂಬಳೆ -7, ಕುತ್ತಿಕೋಲ್ -5, ಮಧೂರು-18, ಮಡಿಕೈ-3, ಮಂಗಲ್ಪಾಡಿ -28, ಮಂಜೇಶ್ವರ -12, ಮೀಂಜ -2, ಮೊಗ್ರಾಲ್ ಪುತ್ತೂರ್ -4, ಮುಳಿಯಾರ್ -15, ಮುಳ್ಳೇರಿಯಾ -1, ನೀಲೇಶ್ವರ -31, ಪಡನ್ನ- 23, ಪೈವಳಿಕೆ -6, ಪಳ್ಳಿಕ್ಕೆರೆ -30, ಪನತ್ತಡಿ -9, ಪಿಲಿಕೋಡ್ -8, ಪುಲ್ಲೂರ್ ಪೆರಿಯಾ -18, ಪುತ್ತಿಗೆ -3, ತ್ರಿಕ್ಕರಿಪುರ -14, ಉದುಮ -21, ವಲಿಯಪರಂಬ -11, ವೆಸ್ಟ್ ಎಳೇರಿ -9, ಇತರ ಜಿಲ್ಲೆಗಳು: ವರಪ್ಪುಳ -1, ಪಡನಕ್ಕಾಡ್ -1, ಪಯ್ಯನ್ನೂರು -2,ಚೆರುಪುಳ -1 ಎಂಬಂತೆ ನೆಗೆಟಿವ್ ಆಗಿದೆ.





