ಕೊಚ್ಚಿ: ತನಗೆ ಮುಖ್ಯಮಂತ್ರಿಯೊಂದಿಗೆ ಆಡಳಿತಾತ್ಮಕವಾದ ಅಧಿಕೃತ ಸಂಬಂಧ ಮಾತ್ರ ಇದೆ ಎಂದು ಸ್ವಪ್ನಾ ಸುರೇಶ್ ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಬಗ್ಗೆ ಮುಖ್ಯಮಂತ್ರಿಗೆ ತಿಳಿದಿದೆಯೇ ಎಂದು ಕೇಳಿದಾಗ, ಸ್ವಪ್ನಾ ಇಲ್ಲ ಎಂದು ಉತ್ತರಿಸಿರುವರು. ತನಗೆ ಮುಖ್ಯಮಂತ್ರಿಯೊಂದಿಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಮತ್ತು ಅಧಿಕೃತ ಸಂಬಂಧ ಮಾತ್ರ ಇದೆ ಎಂದು ಅವರು ಹೇಳಿರುವರು.
ಶಾರ್ಜಾದ ದೊರೆ ಒಮ್ಮೆ ಕೇರಳಕ್ಕೆ ಭೇಟಿನ ನೀಡಿದ್ದ ಸಂದರ್ಭ ಅವರ ಸಂಪ್ರದಾಯದಂತೆ ಹೇಗೆ ಸತ್ಕರಿಸಬೇಕೆಂಬುದನ್ನು ತನ್ನ ಪತ್ನಿಗೆ ತಿಳಿಸಿಕೊಡುವಂತೆ ಮುಖ್ಯಮಂತ್ರಿ ಎಂ. ಶಿವಶಂಕರ್ ಅವರ ಪೋನ್ ಮೂಲಕ ಕೇಳಿದ್ದರು. ಅಲ್ಲದೆ ತನ್ನ ತಂದೆ ನಿಧನರಾದಾಗ ಮುಖ್ಯಮಂತ್ರಿ ಪೋನ್ ಮೂಲಕ ಸಂತಾಪ ಸೂಚಿಸಿದ್ದರು ಎಮದು ಸ್ವಪ್ನಾ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾನ್ಸುಲೇಟ್ ಜನರಲ್ ಅವರ ಜೊತೆಗಲ್ಲದೆ ಒಮ್ಮೆ ಮಾತ್ರ ತಾನು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ಅದು ಶಾರ್ಜಾದ ದೊರೆಯ ಭೇಟಿಗೆ ಸಂಬಂಧಿಸಿ ಸ್ವಾಗತ ಸಮಾರಂಭದ ನಿರ್ವಹಣೆಗಾಗಿ ಆಗಿತ್ತು ಎಂದು ಅವರು ಸ್ವಪ್ನಾ ತಿಳಿಸಿದ್ದಾರೆ.
ಶಾರ್ಜಾದ ಸುಲ್ತಾನರ ಆಗಮನಕ್ಕೆ ಸಂಬಂಧಿಸಿದಂತೆ ಅವರು 2018 ರಲ್ಲಿ ತಾನು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ಸುಲ್ತಾನರ ಸ್ವಾಗತಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಲು ಅವರನ್ನು ದೂತಾವಾಸವು ಕೇಳಿತ್ತು. ಇದರ ಆಧಾರದ ಮೇಲೆ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿರುವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.





