ಕೊಚ್ಚಿ: ಬೇನಾಮಿ ಭೂ ವ್ಯವಹಾರದಲ್ಲಿ ಪಿಣರಾಯಿ ವಿಜಯನ್ ಸರ್ಕಾರದ ಇಬ್ಬರು ಸಚಿವರ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ. ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಮಹಾರಾಷ್ಟ್ರದಲ್ಲಿ ಕೇರಳದ ಇಬ್ಬರು ಮಂತ್ರಿಗಳು ನಿವೃತ್ತ ಐಎಎಸ್ ಅಧಿಕಾರಿಯ ಸಹಾಯದಿಂದ 200 ಎಕರೆ ಭೂಮಿಯನ್ನು ಖರೀದಿಸಿರುವರು. ಮಧ್ಯವರ್ತಿ ಅಧಿಕಾರಿಗೆ 50 ಎಕರೆ ಭೂಮಿ ಕಮಿಶನ್ ಆಗಿ ಲಭ್ಯವಾಗಿದೆ ಎಮದು ತಿಳಿದುಬಂದಿದೆ.
ಮಂತ್ರಿಗಳು ಮತ್ತು ಐಎಎಸ್ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ಪ್ರಮುಖ ಇಲಾಖೆಗಳಲ್ಲಿ ಸಚಿವರಾಗಿರುವರೆನ್ನಲಾಗಿದೆ. ಮಂತ್ರಿಯೊಬ್ಬರು ತಮ್ಮ ಪತ್ನಿಯ ಹೆಸರಿನಲ್ಲಿ ಭೂ ದಾಖಲೆಗಳನ್ನು ನೋಂದಾಯಿಸಿದ್ದಾರೆ. ಬೇನಾಮಿಯನ್ನು ಇಡಿ ಗುರುತಿಸಿದೆ. ತನಿಖೆಯಲ್ಲಿರುವ ಭೂಮಿ ಸಿಂಧುದುರ್ಗ್ ಜಿಲ್ಲೆಯಲ್ಲಿದೆ ಎನ್ನಲಾಗುತ್ತಿದೆ.


