ತಿರುವನಂತಪುರ: ಎಲ್ಲಾ ನಾಲ್ಕು ಚಕ್ರ ವಾಹನಗಳಿಗೂ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದರಿಂದ ಹಳೆಯ ವಾಹನಗಳನ್ನು ಬಳಸುವವರಿಗೆ ಸವಾಲುಗಳು ಎದುರಾಗಲಿದೆ. ಮುಂದಿನ ವರ್ಷದ ಜನವರಿಯಿಂದ ಹಳೆಯ ವಾಹನಗಳಲ್ಲಿ ಫಾಸ್ಟ್ ಟ್ಯಾಗ್‍ಗಳನ್ನು ಸಹ ಕಡ್ಡಾಯಗೊಳಿಸಲಾಗುವುದೆಂದು ಅಧಿಕೃತರು ಈಗಾಗಲೇ ತಿಳಿಸಿದ್ದಾರೆ. ಎಲ್ಲಾ ನಾಲ್ಕು ಚಕ್ರಗಳ ಮಾಲೀಕರು ಟೋಲ್ ಗೇಟ್‍ಗಳನ್ನು ದಾಟದಿದ್ದರೂ ಸಹ ಅವರು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಬಳಸಬೇಕು ಎನ್ನುವುದು ಭಾರೀ ಸಂಕಷ್ಟಕ್ಕೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
2017ರ ಡಿಸೆಂಬರ್ ತಿಂಗಳಿಂದ ಮಾರಾಟವಾದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮಾಡಲಾಗುತ್ತಿದೆ. ಇದಕ್ಕಿಂತಲೂ ಹಳೆಯ ವಾಹನಗಳಿಗೆ ಮುಂದೆ ಫಾಸ್ಟ್ ಟ್ಯಾಗ್ ಬಳಸಲು ನಿರ್ದೇಶಿಸಲಾಗುವುದು.
ನ್ಯಾಷನಲ್ ಇಲೆಕ್ಟ್ರೋನಿಕ್ಸ್ ಟೋಲ್ ಕಲೆಕ್ಷನ್ (ಎನ್.ಇ.ಟಿ.ಸಿ.)ಪ್ರೋಗ್ರಾಂ ನ ಭಾಗವಾಗಿ ಫಾಸ್ಟ್ ಟ್ಯಾಗ್ ವಹಿವಾಟಿನ ಸಂಖ್ಯೆ 2019 ರ ಅಕ್ಟೋಬರ್ ನಲಲಿ 31 ದಶಲಕ್ಷ ದಾಟಿರುವುದಾಗಿ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(ಎಲ್.ವಿ.ಸಿ.ಐ) ಹೇಳಿಕೆ ನೀಡಿತ್ತು. ಹಳೆಯ ನಾಲ್ಕು ಚಕ್ರಗಳ ವಾಹನಗಳಿಗೂ ಕಡ್ಡಾಯ ಆಗುವುದರೊಂದಿಗೆ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಲಿದೆ.
2019ರ ಅಕ್ಟೋಬರ್ ನಲ್ಲಿ, ಫಾಸ್ಟ್‍ಟ್ಯಾಗ್ ವಹಿವಾಟಿನ ಸಂಖ್ಯೆ 31.46 ದಶಲಕ್ಷಕ್ಕೆ ಏರಿಕೆಯಾಗಿತ್ತು. ವಹಿವಾಟಿನ ಮೌಲ್ಯ 702.86 ಕೋಟಿ ರೂ.. 2019 ರ ಸೆಪ್ಟೆಂಬರ್‍ನಲ್ಲಿ 658.94 ಕೋಟಿ ರೂ.ಗಳ 29.01 ಮಿಲಿಯನ್ ವಹಿವಾಟು ನಡೆದಿತ್ತು.


