HEALTH TIPS

ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 2021 ರಲ್ಲಿ ವಿಧಾನಸಭಾ ಚುನಾವಣೆ-ಎಲ್ಲೆಲ್ಲಿ?

       ನವದೆಹಲಿ: ಕೋವಿಡ್ ಸೋಂಕಿನ ಧಾವಂತಗಳು ಮುಂದುವರಿಯುತ್ತಿರುವ ಮಧ್ಯೆ ಚುನಾವಣೆ ನಡೆಸಿದ ದೇಶದ ಮೊದಲ ರಾಜ್ಯ ಬಿಹಾರ. ಭಾರೀ ಕುತೂಹಲ ಮತ್ತು ಪೈಪೋಟಿಯ ನಡುವೆ ಮಹಾ ಘಟಿಬಂಧನ್ ನ್ನು ಮುರಿದು ಕೊನೆಗೂ ಎನ್.ಡಿ.ಎ ಇದೀಗ ಮತ್ತೆ ಅಧಿಕಾರಕ್ಕೆ ಬಂದಿದೆ. ನಿತೀಶ್ ಕುಮಾರ್ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. 

       243 ಸ್ಥಾನಗಳಲ್ಲಿ ಎನ್‍ಡಿಎ 125 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಜೆಡಿಯು ಕೇವಲ 43 ಸ್ಥಾನಗಳನ್ನು ಗೆದ್ದಿದೆ. 75 ಸ್ಥಾನಗಳನ್ನು ಗೆದ್ದ  ಪಕ್ಷವಾದ ಆರ್‍ಜೆಡಿ ಅತಿದೊಡ್ಡ ಪ್ರತಿಪಕ್ಷವಾಗಿದೆ.

          ಬಿಹಾರದ ಬಳಿಕ ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ವಿವಿಧ ರಾಜ್ಯಗಳಲ್ಲಿ ಪಕ್ಷಗಳು ಈಗಾಗಲೇ ಗೆಲುವಿನ ಸಿದ್ಧತೆಗಳನ್ನು ಪ್ರಾರಂಭಿಸಿವೆ. 2021 ರಲ್ಲಿ ಚುನಾವಣೆ ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ.

            ಕೇರಳ:

    2021 ರಲ್ಲಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕೇರಳ ಕೂಡ ಒಂದು. ಪ್ರಸ್ತುತ ಎಡಪಂಥೀಯ ಸರ್ಕಾರದ ಅವಧಿ 2021ರ ಮೇ ಯಲ್ಲಿ ಕೊನೆಗೊಳ್ಳಲಿದೆ. 140 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಸ್ಥಾನದೊಂದಿಗೆ ಎಡರಂಗ 2016 ರಲ್ಲಿ ಅಧಿಕಾರಕ್ಕೆ ಬಂದಿತ್ತು. ಯುಡಿಎಫ್ ಕೇವಲ 47 ಸ್ಥಾನಗಳನ್ನು ಗೆದ್ದಿತ್ತು.

             ಅಸ್ಸಾಂ:

    ಅಸ್ಸಾಂ ವಿಧಾನಸಭಾ ಚುನಾವಣೆ ಏಪ್ರಿಲ್ 2021 ರಲ್ಲಿ ನಡೆಯಲಿದೆ. 2016 ರ ಚುನಾವಣೆಯಲ್ಲಿ ತರುಣ್ ಗೊಗೊಯ್ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಸರ್ಬಾನಂದ ಸೋನೊವಾಲ್ ನೇತೃತ್ವದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ಅಸ್ಸಾಂ 126 ಸ್ಥಾನಗಳಿಗೆ ಸ್ಪರ್ಧಿಸಿತ್ತು.

            ತಮಿಳುನಾಡು:

     ಮೇ 2021 ರಲ್ಲಿ 234 ಸದಸ್ಯರ ವಿಧಾನಸಭೆಯಲ್ಲಿ ತಮಿಳುನಾಡು ಚುನಾವಣೆ ಕಾವೇರುವ ಸೂಚನೆಯಿದೆ. ತಮಿಳು ರಾಜಕೀಯ ಧ್ರುವತಾರೆ ಜೆ. ಜಯಲಲಿತಾ ಮತ್ತು ಕೆ. ಕರುಣಾನಿಧಿ ಇಬ್ಬರೂ ಇಲ್ಲದ ಮೊದಲ ಪೂರ್ಣ ಪ್ರಮಾಣದ ವಿಧಾನಸಭಾ ಚುನಾವಣೆಯಾಗಲಿದೆ. ಜಯಲಲಿತಾ 2016 ರಲ್ಲಿ ಮತ್ತು ಕರುಣಾನಿಧಿ 2018 ರಲ್ಲಿ ನಿಧನರಾದರು.

             ಪಶ್ಚಿಮ ಬಂಗಾಳ:

    294 ಸದಸ್ಯರ ವಿಧಾನಸಭೆಗೆ ಬಂಗಾಳವು 2021 ರಲ್ಲಿ ಚುನಾವಣೆ ನಡೆಯಲಿದೆ. ಪ್ರಸ್ತುತ ಬಂಗಾಳವನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಳುತ್ತಿದೆ.

              ಜಮ್ಮು ಮತ್ತು ಕಾಶ್ಮೀರ:

     ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 2021 ರಲ್ಲಿ ಚುನಾವಣೆ ನಡೆಯಲಿದೆ. ಲಡಾಕ್ ವಿಭಾಗವು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿರದ ಕಾರಣ, ಒಟ್ಟು ಸ್ಥಾನಗಳ ಸಂಖ್ಯೆಯನ್ನು 87 ರಿಂದ 83 ಕ್ಕೆ ಇಳಿಸಲಾಗುತ್ತದೆ. ಲೇಹ್, ಕಾರ್ಗಿಲ್, ಸಾಂಸ್ಕರ್ ಮತ್ತು ನುಬ್ರಾ ನಾಲ್ಕು ಸ್ಥಾನಗಳು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಭಾಗವಾಗಿರುವುದಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries