HEALTH TIPS

ಮೂಲ ಕೋವಿಡ್ ಪರೀಕ್ಷಾ ಪ್ರಮಾಣಪತ್ರಕ್ಕೆ 2,100 ರೂ. ಮತ್ತು ಕೋವಿಡ್ ನೆಗೆಟಿವ್ ಗೆ 3,500 ರೂ.-ಇದು ಕಾಸರಗೋಡಿನಲ್ಲಿ ನಡೆದ ಬೃಹತ್ ಕೋವಿಡ್ ದಂಧೆ

 

       ಕಾಸರಗೋಡು: ಕಾಸರಗೋಡಿನ ತಳಂಗರೆಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಮುಚ್ಚಲಾಗಿದೆ. ಲ್ಯಾಬ್ ಪರವಾನಗಿ ಪಡೆಯದಿರುವುದು ಕಂಡುಬಂದಿದೆ ಮತ್ತು ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವುದನ್ನು ಪತ್ತೆಹಚ್ಚಲಾಗಿದೆ. ಕೋಝಿಕ್ಕೋಡ್ ನ ಕೋವಿಡ್ ಪರೀಕ್ಷಾ ಕೇಂದ್ರದ ಪರವಾನಗಿ ಪಡೆದ ಖಾಸಗಿ ಲ್ಯಾಬ್‍ಗೆ ಮತ್ತೊಂದು ಖಾಸಗಿ ಲ್ಯಾಬ್‍ನ ಹೆಸರಿನಲ್ಲಿ ಇಲ್ಲಿಯ ಲ್ಯಾಬ್ ಕಾರ್ಯಾಚರಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. 

     ತಳಂಗರೆಯ ಬೀದಿಯಲ್ಲಿರುವ ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲ್ಯಾಬ್ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿ ಅದನ್ನು ಮುಚ್ಚಿದ್ದಾರೆ. ತಪಾಸಣೆಗಾಗಿ ಪ್ರತಿದಿನ ಐವತ್ತಕ್ಕೂ ಹೆಚ್ಚು ಜನರು ಇಲ್ಲಿಗೆ ಬರುತ್ತಿದ್ದರೆಂದು ಪೋಲೀಸರು ತಿಳಿಸಿದ್ದಾರೆ. 

     ಇಲ್ಲಿಯ ಪರಿಶೀಲನೆಗೆ ಮೂಲ ಕೋವಿಡ್ ಪರೀಕ್ಷಾ ಪ್ರಮಾಣಪತ್ರವಾದರೆ 2,100 ರೂ. ಪಡೆಯುತ್ತಿದ್ದರು. ಆದರೆ ಕೋವಿಡ್ ಇಲ್ಲವೆಂಬ ಪ್ರಮಾಣ ಪತ್ರಕ್ಕೆ 3,500 ರೂ ಪಾವತಿಸಬೇಕಾಗುತ್ತಿತ್ತು. ಕೋವಿಡ್ ಡೇಟಾ ಕೇಂದ್ರದಲ್ಲಿ ಮಾಹಿತಿ ಪಡೆಯಲು ಕಡ್ಡಾಯವಾಗಿರುವ ಮಾದರಿ ಉಲ್ಲೇಖ ನಮೂನೆ ಸಂಖ್ಯೆಯನ್ನು ಪರೀಕ್ಷಾ ಫಲಿತಾಂಶದೊಂದಿಗೆ ಒದಗಿಸಲಾಗಿಲ್ಲ.

         ಕೋವಿಡ್ ರೋಗಿಗಳನ್ನು ದೈನಂದಿನ ವರದಿಯಲ್ಲಿ ಇಲ್ಲಿಯ ಪರಿಶೀಲನಾ ವರದಿ ಈವರೆಗೆ ಎಲ್ಲೂ ದಾಖಲಾಗದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ಮತ್ತು ಪೆÇಲೀಸ್ ತನಿಖೆಯ ಪರಿಶೀಲನೆಯ ಸಮಯದಲ್ಲಿ, ಲ್ಯಾಬ್ ಮಾಲೀಕ ಮೊಗ್ರಾಲ್ ಪುತ್ತೂರಿನ ಡಾ.ಸಫ್ವಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ ಎಂಬ ಸೂಚನೆಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries