ಸಂಪರ್ಕದ ಮೂಲಕ 2347 ಜನರಿಗೆ ಸೋಂಕು ತಗಲಿದೆ. ಜೊತೆಗೆ 39 ಆರೋಗ್ಯ ಕಾರ್ಯಕರ್ತರಿಗೆ ಇಂದು ಸೋಂಕು ದೃಢ ಪಡಿಸಲಾಗಿದೆ. ಸೋಂಕು ಬಾಧಿತರಾದ ಪ್ಯೆಕಿ 269 ಮಂದಿಗಳ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇಂದು 19 ಕೋವಿಡ್ ಸಾವುಗಳು ದೃಢಪಟ್ಟಿದೆ.6265 ಮಂದಿ ಇಂದು ಗುಣಮುಖರಾಗಿರುವರು.
ಕಳೆದ 24 ಗಂಟೆಗಳಲ್ಲಿ 25149 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ 10.76ಶೇ.ದಷ್ಟಿದೆ. ಇಂದು, 6265 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 70925 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಸರ್ಕಾರ ಯಾವಾಗಲೂ ಜಾಗರೂಕವಾಗಿದೆ. ಕೋವಿಡ್ ಉತ್ತುಂಗಕ್ಕೇರಿರುವಾಗಲೂ, ಸಾವಿನ ಸಂಖ್ಯೆ ಕಡಿಮೆ ಇತ್ತು. ಕೋವಿಡ್ ಹರಡುವಿಕೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ತಪಾಸಣೆಯಲ್ಲಿ ಏರಿಳಿತಗಳಿವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಸೋಂಕು ಬಾಧಿತ ಜಿಲ್ಲಾವಾರು ವಿವರ:
ಮಲಪ್ಪುರಂ 496, ಕೋಝಿಕ್ಕೋಡ್ 402, ಎರ್ನಾಕುಲಂ 279, ತ್ರಿಶೂರ್ 228, ಆಲಪ್ಪುಳ 226, ತಿರುವನಂತಪುರ 204, ಕೊಲ್ಲಂ 191, ಪಾಲಕ್ಕಾಡ್ 185, ಕೊಟ್ಟಾಯಂ 165, ಕಣ್ಣೂರು 110, ಇಡುಕಿ 83, ಕಾಸರಗೋಡು 64, ಪತ್ತನಂತಿಟ್ಟು 40,ವಯನಾಡ್ 37 ಎಂಬಂತೆ ಇಂದು ಸೋಂಕು ಬಾಧಿಸಿದೆ.




