HEALTH TIPS

ಕೇರಳದಲ್ಲಿ ಇಂದು 5772 ಮಂದಿಗೆ ಕೋವಿಡ್-6719 ಮಂದಿ ಗುಣಮುಖ-ಕಾಸರಗೋಡಲ್ಲಿ 104 ಮಂದಿಗೆ ಸೋಂಕು

     

             ತಿರುವನಂತಪುರ: ಕೇರಳದಲ್ಲಿ ಇಂದು 5772 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಮಾಹಿತಿಗಳನ್ನು ತಿಳಿಸಲಾಗಿದೆ. 

                  ಜಿಲ್ಲಾವಾರು ಮಾಹಿತಿ: 

    ಇಂದು ಹೆಚ್ಚಿನ ಸೋಂಕಿತರು ಎರ್ನಾಕುಳಂ ಜಿಲ್ಲೆಯಲ್ಲಿ ದಾಖಲಾಗಿವೆ. ಎರ್ನಾಕುಳಂ 797, ಮಲಪ್ಪುರಂ 764, ಕೋಝಿಕ್ಕೋಡ್ 710, ತ್ರಿಶೂರ್ 483, ಪಾಲಕ್ಕಾಡ್ 478, ಕೊಲ್ಲಂ 464, ಕೊಟ್ಟಾಯಂ 423, ತಿರುವನಂತಪುರ 399, ಆಲಪ್ಪುಳ 383, ಪತ್ತನಂತಿಟ್ಟು 216, ಕಣ್ಣೂರು 211, ಇಡುಕ್ಕಿ 188, ವಯನಾಡ್ 152, ಕಾಸರಗೋಡು 104 ಎಂಬಂತೆ ಸೋಂಕು ದೃಢಪಟ್ಟಿದೆ. 

                  ಸೋಂಕು ಮುಕ್ತರಾದವರ ವಿವರ: 

         ಕೋವಿಡ್ ದೃಢಪಡಿಸಿದ ಮತ್ತು ಚಿಕಿತ್ಸೆ ಪಡೆದ ಒಟ್ಟು 6719 ಜನರನ್ನು ಇಂದು ಗುಣಪಡಿಸಲಾಗಿದೆ. ತಿರುವನಂತಪುರ 609, ಕೊಲ್ಲಂ 681, ಪತ್ತನಂತಿಟ್ಟು 167, ಆಲಪ್ಪುಳ 919, ಕೊಟ್ಟಾಯಂ 271, ಇಡಕ್ಕಿ 72, ಎರ್ನಾಕುಳಂ 658, ತ್ರಿಶೂರ್ 680, ಪಾಲಕ್ಕಾಡ್ 590, ಮಲಪ್ಪುರಂ 740, ಕೋಝಿಕ್ಕೋಡ್ 622, ವಯನಾಡ್ 79, ಕಣ್ಣೂರು 473,ಕಾಸರಗೋಡು 158 ಎಂಬಂತೆ ಗುಣಮುಖರಾಗಿರುವರು. 

                     ಕೋವಿಡ್ ಗೆ ಇಂದು 25 ಮಂದಿ ಬಲಿ: 

       ಇಂದು ಕೋವಿಡ್ ಬಾಧಿಸಿದ್ದ 25 ಮಂದಿ ಮರಣಹೊಂದಿರುವರು. ತಿರುವನಂತಪುರ ವೆಳ್ಳಯಣಿಯ ಸರೋಜಿನಿ (82), ತಿರುಪುರಂನ ಜೆರಾಡ್ (74), ಕರಿಕ್ಕಾಕಂನ ಸಿನು (42), ಪಳ್ಳಿತ್ತುರದ ಸುಬ್ರಮಣಿಯನ್ (68), ಕಾಂಞÂರಂಪಾರದ ನಳಿನಿ (57), ಕೊಟ್ಟಕಲ್ ನ ಸರೋಜಿನಿ (65), ಪಾಚ್ಚಲ್ಲೂರಿನ ಶಿಶುಪಾಲನ್ (61),  ಕೊಲ್ಲಂ ವಡಕ್ಕುಂ ಭಾಗಂನ  ನಸೀರತ್(47), ಆಲಪ್ಪುಳದ ಅವಳುಕುನ್ನಿನ ಶಶಿಧರನ್ ಪಿಳ್ಳೈ (75), ವಿಯಾಪುರಂನ ಜಾನ್ ಚಾಂಡಿ (65), ಆಲಪ್ಪುಳದ ನಸೀಮಾ (66), ಕಾಯಂಕುಳಂನ ತಂಗಮ್ಮ (80), ಮುಯಮ್ಮದ ಶತೀಶನ್ (60), ಕೋಟ್ಟಯಂ ಚಂಗನಶ್ಚೇರಿಯ ಸದಾಶಿವನ್ (59), ಕೋಟ್ಟಯಂ ನ  ಬಿಜು ಮ್ಯಾಥ್ಯೂ (54), ತೃಶೂರ್ ನಡತ್ತರದ ಎಂ.ಪಿ. ಆಂಟನಿ (80), ಪಾಲಕ್ಕಾಡ್ ಪಿರಯಿರಿಯ ಶಾಹುಲ್ ಹಮೀದ್ (58), ಲಕ್ಕಿಡಿಯ ಬಾಲಕೃಷ್ಣನ್ (85), ಪುಂಚಪಾಡಂನ ಕುಂಞÂ ರಾಮನ್ (74), ಮಲಪ್ಪುರಂ ಮಂಜೇರಿಯ ಸಯ್ಯದಲಿ ಕುಟ್ಟಿ (63), ಕಾಕ್ಕೋವ್‍ನ ಬಶೀರ್ (43), ಕೋಝಿಕ್ಕೋಡ್ ಕುರವಲ್ ತುರುತ್ತಿಯ ಅಹ್ಮದ್ ಹಾಜಿ (75),ನರಿಕುನ್ನಿಯ ಟಿ.ಪಿ. ಅಬ್ದುಲ್ಲಕುಟ್ಟಿ (84), ವಿಲುಪ್ಪಿಳ್ಳೆಯ ಮೊಯಿದು (65), ವೆಸ್ಟ್ ಹಿಲ್‍ನ ಕೆ. ರವೀಂದ್ರನಾಥ್(72), ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2022 ಕ್ಕೆ ಏರಿಕೆಯಾಗಿದೆ. 

                     ದೇಶದ ಕೋವಿಡ್ ಪ್ರಕರಣಗಳು

      ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 90,50,598 ರಷ್ಟಿದೆ. ದೇಶದಲ್ಲಿ ಪ್ರಸ್ತುತ 4,39,747 ಸಕ್ರಿಯ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯದ ಪ್ರಕಾರ, 84,78,124 ಜನರನ್ನು ಗುಣಪಡಿಸಲಾಗಿದೆ. ನಿನ್ನೆ 49,715 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ ಸೋಂಕಿನಿಂದ 1,32,726 ಜನರು ಸಾವನ್ನಪ್ಪಿದ್ದಾರೆ.

                  ಇತರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ:

       ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರ ಸೇರಿದಂತೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕಳೆದ ಕೆಲವು ದಿನಗಳಿಂದ, ಮಹಾರಾಷ್ಟ್ರದಲ್ಲಿ ದೈನಂದಿನ ಅಂಕಿ ಅಂಶಗಳು ಅಲ್ಪಮ ಹೆಚ್ಚಿವೆ. ಕೇರಳ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ದಿನನಿತ್ಯದ ಅಂಕಿ ಅಂಶಗಳಲ್ಲಿ ಒಂದಷ್ಟು ಹೆಚ್ಚಳವಿದ್ದರೂ ಕುಸಿತದ ಹಾದಿಯಲ್ಲಿದೆ. ಸಂಪರ್ಕದ ಮೂಲಕ ಸೋಂಕು ಹೆಚ್ಚು ಹರಡುತ್ತಿರುವುದಾಗಿ ಗುರುತಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries