ಕೊಚ್ಚಿ: ವಿವಾದಾತ್ಮಕ ಆಡಿಯೊ ರೆಕಾಡಿರ್ಂಗ್ ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸ್ವಾಪ್ನಾ ಸುರೇಶ್ ಅವರನ್ನು ನೇರವಾಗಿ ಪ್ರಶ್ನಿಸಲಿದೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ಅನುಮತಿಯೊಂದಿಗೆ ಅಟ್ಟಕ್ಕುಳಂಗರ ಜೈಲಿಗೆ ತೆರಳಿ ಸ್ವಪ್ನಾಳನ್ನು ಇ.ಡಿ. ಪ್ರಶ್ನಿಸಲು ತಯಾರಿ ನಡೆಸಿದೆ.
ಚಿನ್ನ ಕಳ್ಳ ಸಾಗಾಟಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ಹೆಸರನ್ನು ಹೇಳಲು ತನಿಖಾ ಸಂಸ್ಥೆ ಒತ್ತಡ ಹೇರಿದೆ ಎಂಬ ಸ್ವಪ್ನಾಳದ್ದೆಂದು ಹೇಳಲ್ಪಡುವ ಶಬ್ದ ಸಂದೇಶದ ಹಿಂದೆ ನಿಯೋಜಿತ ಪಿತೂರಿ ನಡೆದಿದೆಯೆಂದು ಇ.ಡಿ. ಅಂದಾಜಿಸಿದೆ.
ರಾಜ್ಯ ತನಿಖಾ ಸಂಸ್ಥೆಗಳ ತನಿಖೆ ತೃಪ್ತಿಕರವಾಗಿಲ್ಲ ಮತ್ತು ಆಡಿಯೊ ಟೇಪ್‍ನ ಹಿಂದಿರುವವರನ್ನು ಬೆಳಕಿಗೆ ತರಲು ಈ ಏಜೆನ್ಸಿಗಳು ಆಸಕ್ತಿ ಹೊಂದಿಲ್ಲ ಎಂಬ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ನೇರ ತನಿಖೆ ನಡೆಸುತ್ತಿದೆ.
ನ್ಯಾಯಾಂಗ ಬಂಧನದಲ್ಲಿರುವ ಸ್ವಪ್ನಾ ಅವರನ್ನು ಪ್ರಶ್ನಿಸಲು ನ್ಯಾಯಾಲಯದ ಅನುಮತಿಯ ಅಗತ್ಯವಿದೆ. ಧ್ವನಿ ಸ್ವಪ್ನಾಳದ್ದೇ ಆಗಿದ್ದರೆ ಅದನ್ನು ಜೈಲಿನಿಂದಲೇ ದಾಖಲಿಸಿರಬಹುದೆಂದು ಜಾರಿ ನಿರ್ದೇಶನಾಲಯ ಅಭಿಪ್ರಾಯಪಟ್ಟಿದೆ.
ಯಾವ ತನಿಖಾ ಸಂಸ್ಥೆ ಎಂದು ಸ್ವಪ್ನಾ ಹೇಳದಿದ್ದರೂ, ಇ.ಡಿ ಬಗ್ಗೆ ದೂರು ನೀಡಲಾಗಿದೆ ಎಂಬ ವದಂತಿಯಿದೆ.





