ತಿರುವನಂತಪುರ: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಹಿಂದೂ ದೇವಾಲಯಗಳಿಗೆ ಅತ್ಯಧಿಕ ವಿದ್ಯುತ್ ದರ ವಸೂಲಿಮಾಡಲಾಗುತ್ತಿದ್ದು ಚರ್ಚು ಹಾಗೂ ಮಸೀದಿಗಳಿಂದ ಕಡಿಮೆ ದರದ ಬಿಲ್ ವಸೂಲಿಮಾಡಲಾಗುತ್ತಿದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಯುತ್ತಿದೆ. ಜಾತ್ಯತೀತ ಕೇರಳದ ವಿದ್ಯುತ್ ಬಿಲ್ಲಿಂಗ್ ವಿಧಾನ. ಕ್ರಿಶ್ಚಿಯನ್ ಚರ್ಚ್ - 2.85 /, ಮಸೀದಿ - 2.85 /, ಹಿಂದೂ ದೇವಾಲಯ 8- ರೂ. ಎಂಬ ಸಂದೇಶಗಳು ಭಾರೀ ಸದ್ದು ಮಾಡುತ್ತಿದ್ದು ಈ ಬಗ್ಗೆ ರಾಜ್ಯ ವಿದ್ಯುತ್ ಬೋರ್ಡ್ ಸ್ಪಷ್ಟೀಕರಣ ನೀಡಿದೆ.
ವಿದ್ಯುತ್ ದರವನ್ನು ನಿಗದಿಪಡಿಸುವ ರಾಜ್ಯ ವಿದ್ಯುತ್ ನಿಯಂತ್ರಣ ಬೋರ್ಡ್ ನ ಅರೆ ನ್ಯಾಯಾಂಗ ಮಂಡಳಿಯು( Quasi Judicial Body) ಅನುಮೋದಿಸಿದ ತಾರೀಫ್ ಪ್ರಕಾರ, ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್ ಗಳಿಗೆ ದರಗಳು ಒಂದೇ ಆಗಿರುತ್ತವೆ. ಕೆಎಸ್‍ಇಬಿ ಇದನ್ನು ಅನುಸರಿಸಿ ವಿದ್ಯುತ್ ಬಿಲ್ ಸಿದ್ಧಪಡಿಸುತ್ತದೆ. 500 ಯೂನಿಟ್ ಗಳಿಗಿಂತ ಕಡಿಮೆ ಬಳಸುವ ಗ್ರಾಹಕ ಸಂಸ್ಥೆ(ದೇವಾಲಯ, ಮಸೀದಿ, ಚರ್ಚು....ಇತ್ಯಾದಿ)ಯೂನಿಟ್ ಗೆ ನಿಗದಿತ 5.70 ರೂ. ಮತ್ತು 500 ಯೂನಿಟ್‍ಗಳಿಗಿಂತ ಹೆಚ್ಚು ಬಳಸುವ ಸಂಸ್ಥೆಗೆ 6.50 ರೂ. ಎಂಬ ತಾರೀಫು ದರದಲ್ಲಿ ಬಿಲ್ ನೀಡಲಾಗುತ್ತದೆ. ಇದಲ್ಲದೆ, ತಿಂಗಳಿಗೆ ಪ್ರತಿ ಕಿಲೋವ್ಯಾಟ್‍ಗೆ 65 ರೂ.ಗಳ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಇದು ಸತ್ಯ ಎಂದು ಕೆಎಸ್‍ಇಬಿ ಸ್ಪಷ್ಟಪಡಿಸುತ್ತದೆ.
ಇಂತಹ ಸುಳ್ಳು ಪ್ರಚಾರದ ಮೂಲಕ ಜನರಿಗೆ ಬದ್ಧವಾಗಿರುವ ಕೆಎಸ್‍ಇಬಿಯನ್ನು ಸಾರ್ವಜನಿಕ ವಲಯವು ನಾಶಮಾಡಲು ಸಾಧ್ಯವಿಲ್ಲ. ನಕಲಿ ಅಪಪ್ರಚಾರದಿಂದ ನಾವು ಮೋಸಹೋಗಬಾರದು ಎಂದು ಕೆಎಸ್‍ಇಬಿ ಹೇಳಿದೆ.





