ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಸಂಪರ್ಕ ತನಗೆ ಇತ್ತೆಂದು ಬಿಜು ರಮೇಶ್ ಹೇಳಿದ್ದಾರೆ. ಸ್ವಾಪ್ನಾ ಅವರು ಕಾನ್ಸುಲೇಟ್ ಅಧಿಕಾರಿಗಳ ಬಳಕೆಗೆ ಮದ್ಯ ಸರಬರಾಜಿಗೆ ನನ್ನಲ್ಲಿ ಕೇಳುತ್ತಿದ್ದರು ಎಂದು ಬಿಜು ರಮೇಶ್ ಹೇಳಿದ್ದಾರೆ. ಅವರು ಸ್ವಪ್ನಾ ಸುರೇಶ್ ಅವರನ್ನು ಕರೆದಿದ್ದಾರೆಯೇ ಎಂಬ ಮಾಧ್ಯಮ ಪ್ರಶ್ನೆಗೆ ಬಿಜು ರಮೇಶ್ ಉತ್ತರಿಸುತ್ತಿದ್ದರು.
'ಸ್ವಪ್ನಾ ಸುರೇಶ್ ನನ್ನನ್ನು ಮತ್ತು ನಾನು ಸ್ವಪ್ನಾ ಅವರನ್ನು ಕರೆದಿದ್ದಿದೆ. ಆದರದು ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ್ದಾಗಿರಲಿಲ್ಲ. ರಾಯಭಾರ ಕಚೇರಿಗೆ ಒಂದಷ್ಟು ಬಾಟಲಿಗಳು ಬೇಕೆಂದು ಕೇಳಲು ಕರೆ ಮಾಡಿದ್ದರು. ಭೇಟಿಯಾಗಲು ಬಯಸಿ ಕರೆಸಿಕೊಂಡಿದ್ದರು. ಬಳಿಕ ಬೆಲೆ ನಿಗದಿಗೂ ಕರೆಸಲಾಗಿತ್ತು. ಬಳಿಕ ಸ್ವಪ್ನ ಪಿಆಒ ರಿಂದ ಹಣವನ್ನು ಪಡೆದು ತೆರಳಿದ್ದೆ ಎಂದು ಬಿಜು ರಮೇಶ್ ಮಾಧ್ಯಮಕ್ಕೆ ತಿಳಿಸಿದರು.
ಸ್ವಪ್ನಾಳೊಂದಿಗೆ ಸಂಬಂಧವಿದೆ ಎಂದು ಬಿಜು ರಮೇಶ್ ಹೇಳಿದರು. 'ಸ್ವಪ್ನಾ ಸುರೇಶ್ ತನ್ನ ತಂದೆಯ ಎರಡನೇ ಸೋದರನ , ಮಗನ ಮಗಳು. ಆದರೆ ಇದಕ್ಕೆ ಸುಕೇಶನ್ ನೊಂದಿಗೆ ಯಾವುದೇ ಸಂಬಂಧವಿಲ್ಲ 'ಎಂದು ಬಿಜು ರಮೇಶ್ ಹೇಳಿದ್ದಾರೆ. ತಂದೆಯ ಮರಣದ ಸುದ್ದಿಯನ್ನು ಬಳಿಕ ಮತ್ತು ತಂದೆಯ ಮರಣೋತ್ತರ ಸಮಾರಂಭಕ್ಕೆ ಸಂಬಂಧಿಸಿದಂತೆ ಮದ್ಯದ ಆರ್ಡರ್ ಪಡೆಯಲು ಕರೆದಿದ್ದೆ ಎಂದು ಬಿಜು ಹೇಳಿದರು.
ಏತನ್ಮಧ್ಯೆ, ಬಾರ್ ಲಂಚಕ್ಕಾಗಿ ಬಿಜು ರಮೇಶ್ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೆಎಂ ಮಾಣಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಬಾರ್ ಲಂಚ ಪ್ರಕರಣ ತನಿಖೆ ಆರಂಭಗೊಂಡಿತೆಂದು ಬಿಜು ರಮೇಶ್ ಆರೋಪಿಸಿದ್ದಾರೆ.





