ಕಾಸರಗೋಡು: ಜಿಲ್ಲಾ ಸೈನಿಕ ಮಂಡಳಿ ಮತ್ತು ಸಶಸ್ತ್ರ ಸೇನಾ ಧ್ವಜ ದಿನ ನಿಧಿ ಸಮಿತಿಗಳ ಸಭೆ ಜರುಗಿತು.
ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ಸಿರೋಷ್ ಪಿ.ಜಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸೈನಿಕ ಕಲ್ಯಾಣ ನಿಧಿಯಿಂದ 30 ಅರ್ಜಿಗಳ ಮೂಲಕ 2,05,000 ರೂ., 4 ಅರ್ಜಿಗಳಿಂದ ತುರ್ತು ಆರ್ಥಿಕ ಸಹಾಯ ರೂಪದಲ್ಲಿ 20,000 ರೂ. ಮಂಜೂರು ಮಾಡಲಾಗಿದೆ. ರಾಜ್ಯ ಸೈನಿಕ ಕಲ್ಯಾಣ ನಿಧಿಯಿಂದ 10 ಅರ್ಜಿದಾರರಿಗೆ 82,000 ರೂ., ಒಬ್ಬ ನಿವೃತ್ತ ಸೈನಿಕನ ವಿಧವೆಗೆ ಹೊಲಿಗೆ ಯಂತ್ರ ಮಂಜೂರು ಮಾಡಲು ಶಿಪಾರಸು ಮಾಡಲಾಗಿದೆ.
ಈ ವರ್ಷದ ಸಶಸ್ತ್ರ ಸೇನಾ ಧ್ವಜ ದಿನಾಚರಣೆ ಕೋವಿಡ್ 19 ಹಿನ್ನೆಲೆಯಲ್ಲಿ ಸರಕಾರಿ ಕಟ್ಟುನಿಟ್ಟುಗಳನ್ನು ಪಾಲಿಸಿ ಜಿಲ್ಲಾಧಿಕಾರಿ ಅವರ ಆದೇಶ ಪ್ರಕಾರ ನಡೆಸಲು ನಿರ್ಧರಿಸಲಾಯಿತು. 2019 ರ ಸಶಸ್ತ್ರ ಸೇನ ಧ್ವಜ ದಿನಾಚರಣೆ ನಿಧಿಗೆ ಬಾಕಿಯಿರುವ ನಿಧಿಯನ್ನು ಎಲ್ಲ ಕಚೇರಿಗಳು, ಶಾಲೆಗಳು, ಸಂಸ್ಥೆಗಳು ಜಿಲ್ಲಾ ಸೈನಿಕ ಕಚೇರಿಗಳ ಮೂಲಕ ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.
ಸಭೆಯಲ್ಲಿ ಸೈನಿಕ ಮಂಡಳಿ ಉಪಾಧ್ಯಕ್ಷ ಬ್ರಿಗೇಡಿಯರ್ ಟಿ.ಸಿ.ಅಬ್ರಾಹಂ, ಅಡೀಷನಲ್ ಎಸ್.ಪಿ.ಝೇವ್ಯರ್ ಸೆಬಾಸ್ಟಿನ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಅಬಕಾರಿ ಡೆಪ್ಯೂಟಿ ಕಮೀಷನರ್ ವಿನೋದ್ ಬಿ.ನಾಯರ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಕಾರ್ಮಿಕ ಅ„ಕಾರಿ ವತ್ಸಲನ್, ಸೈನಿಕ ಕಲ್ಯಾಣ ವೆಲೇರ್ ಆರ್ಗನೈಸರ್ ಚಂದ್ರನ್ ಪಿ., ಜಿಲ್ಲಾ ಸಾಮಾಜಿಕ ನ್ಯಾಯ ಅ„ಕಾರಿ ಬಿಜು ಪಿ., ಲೀಡ್ ಬ್ಯಾಂಕ್ ಅಧಿಕಾರಿ ಎನ್.ದಯಾನಂದ, ಮಂಡಳಿ ಸದಸ್ಯರು, ಜಿಲ್ಲಾ ಕಚೇರಿ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು.

