ಬದಿಯಡ್ಕ: ಆಲ್ ಕೇರಳ ಪೋಟೋ ಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ವಲಯ ಸಮ್ಮೇಳನ ಜಿಲ್ಲಾಧ್ಯಕ್ಷ ಸುಕು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಪಾಲಕುನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀಜಿತ್ ನಿಲಾಯಿ ವರದಿ ಮಂಡಿಸಿದರು. ವಲಯ ಕಾರ್ಯದರ್ಶಿ ರಾಜೇಂದ್ರನ್ ಅವರು ಚಟುವಟಿಕೆ ವರದಿಯನ್ನು ಮಂಡಿಸಿದರು. ಜಿಲ್ಲಾ ಖಜಾಂಚಿ ಮನೋಹರನ್, ಜಿಲ್ಲಾ ಉಪಾಧ್ಯಕ್ಷ ಸಂಜೀವ ರೈ, ವಲಯ ಉಸ್ತುವಾರಿ ಪ್ರಜಿತ್ ಶುಭಾಶಂಸನೆಗೈದರು.
ಸಮ್ಮೇಳನದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಛಾಯಾಚಿತ್ರ ಗ್ರಹಣ ಸ್ಪರ್ಧೆಯ ವಿಜೇತ ದಿನೇಶ್ ಇನ್ಸೈಟ್ ಅವರನ್ನು ಗೌರವಿಸಲಾಯಿತು. ರಾಜೇಂದ್ರನ್ ಸ್ವಾಗತಿಸಿ, ವಾಸು ವಂದಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಸಂಜೀವ ರೈ(ಅಧ್ಯಕ್ಷ), ಗೌತಮ್(ಉಪಾಧ್ಯಕ್ಷ), ರಾಜೇಂದ್ರನ್(ಕಾರ್ಯದರ್ಶಿ), ಅಜಿತ್(ಜೊತೆ ಕಾರ್ಯದರ್ಶಿ), ರತೀಶ್(ಖಜಾಂಜಿ), ಹಾಗೂ ಜಿಲ್ಲಾ ಸಮಿತಿ ಪ್ರತಿನಿಧಿಯಾಗಿ ಗೋವಿಂದನ್ ಚಕ್ಕರಲ್‍ಕಾಡ್, ದಿನೇಶ್ ಇನ್ಸೈಟ್ ಅವರನ್ನು ಆಯ್ಕೆಮಾಡಲಾಯಿತು.


