HEALTH TIPS

ಇಡೀ ದೇಶಕ್ಕೆ ಗರ್ವದ ಸಂಗತಿ, ಕಳವಾಗಿದ್ದ ಪುರಾತನ ದೇವಿ ಅನ್ನಪೂರ್ಣ ಮೂರ್ತಿ ಕೆನಡಾದಿಂದ ಭಾರತಕ್ಕೆ ಬರುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

      ನವದೆಹಲಿ: ನೂರು ವರ್ಷಗಳ ಹಿಂದೆ ಭಾರತದಿಂದ ಕೆನಡಾಗೆ ಕಳುವಾಗಿ ಹೋಗಿದ್ದ ಪುರಾತನ ದೇವಿ ಅನ್ನಪೂರ್ಣ ವಿಗ್ರಹವನ್ನು ಮರಳಿ ಭಾರತಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

     'ಸುಮಾರು 100 ವರ್ಷಗಳ ಹಿಂದೆ 1913 ರಲ್ಲಿ ದೇವಿ ಅನ್ನಪೂರ್ಣ ವಿಗ್ರಹವನ್ನು ವಾರಣಾಸಿಯ ದೇವಸ್ಥಾನವೊಂದರಿಂದ ಕದ್ದು ದೇಶದಿಂದ ಕಳ್ಳಸಾಗಣೆ ಮಾಡಲಾಗಿತ್ತು. ಇದೀಗ ಕೆನಡಾ ಸರ್ಕಾರದೊಂದಿಗಿನ ಫಲಪ್ರದ ಮಾತುಕತೆಯ ಫಲವಾಗಿ ಐತಿಹಾಸಿಕ ಅನ್ನಪೂರ್ಣ ದೇವಿ ದೇಗುಲ  ಭಾರತಕ್ಕೆ ಮರಳುತ್ತಿದೆ. ಇದು ಪ್ರತೀಯೊಬ್ಬ ಭಾರತೀಯನೂ ಹೆಮ್ಮ ಪಡಬೇಕಾದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು.

      ಭಾರತದ ಸಂಸ್ಕೃತಿ ಮತ್ತು ಧರ್ಮಗ್ರಂಥವು ಯಾವಾಗಲೂ ಇಡೀ ಜಗತ್ತನ್ನು ಆಕರ್ಷಿಸುವ ಕೇಂದ್ರವಾಗಿದೆ. ಕೆಲವರು ಅದನ್ನು ಹುಡುಕಿಕೊಂಡು ಭಾರತಕ್ಕೆ ಬಂದು ಜೀವನಕ್ಕಾಗಿ ಇಲ್ಲಿಯೇ ನೆಲೆಸಿದ್ದರು. ಕೆಲವರು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ತಮ್ಮ ದೇಶಗಳಿಗೆ  ಮರಳಿದ್ದಾರೆ. 'ವಿಶ್ವನಾಥ್' ಎಂದೂ ಕರೆಯಲ್ಪಡುವ ಜೊನಸ್ ಮಾಸೆಟ್ಟಿ ಅವರ ಕೆಲಸದ ಬಗ್ಗೆ ನನಗೆ ತಿಳಿಯಿತು. ಜೊನಸ್ ಬ್ರೆಜಿಲ್ನಲ್ಲಿ ವೇದಾಂತ ಮತ್ತು ಗೀತಾ ಬಗ್ಗೆ ಪಾಠ-ಪ್ರವಚನಗಳನ್ನು ನೀಡುತ್ತಿದ್ದಾರೆ. ಅವರು ರಿಯೊ ಡಿ ಜನೈರೊದ ಪೆಟ್ರೊಪೊಲಿಸ್‌ ಬೆಟ್ಟಗಳಲ್ಲಿರುವ 'ವಿಶ್ವವಿದ್ಯಾ' ಎಂಬ  ಸಂಘಟನೆಯನ್ನು ನಡೆಸುತ್ತಿದ್ದಾರೆ. 

     ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ, ಜೊನಸ್ ತನ್ನ ಸ್ಟಾಕ್ ಮಾರ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಅವರು ಭಾರತೀಯ ಸಂಸ್ಕೃತಿಯತ್ತ, ವಿಶೇಷವಾಗಿ ವೇದಾಂತದತ್ತ ಆಕರ್ಷಿತರಾದರು. ಅವರು ಭಾರತದಲ್ಲಿ ವೆಂದಾಂತವನ್ನು ಅಧ್ಯಯನ ಮಾಡಿದರು  ಮತ್ತು ಕೊಯಮತ್ತೂರಿನ ಅರ್ಷಾ ಗುರು ಗುರುಕುಲಂನಲ್ಲಿ 4 ವರ್ಷಗಳನ್ನು ಕಳೆದರು. ಜೊನಸ್ ಅವರ ಪ್ರಯತ್ನಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

     ನಾಳೆ ನಾವು ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನು ಆಚರಿಸುತ್ತೇವೆ. ಅವರ ಪ್ರಭಾವ ಇಡೀ ಜಗತ್ತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ವ್ಯಾಂಕೋವರ್‌ನಿಂದ ವೆಲ್ಲಿಂಗ್ಟನ್‌ವರೆಗೆ, ಸಿಂಗಾಪುರದಿಂದ ದಕ್ಷಿಣ ಆಫ್ರಿಕಾವರೆಗೆ, ಅವರ ಸಂದೇಶವು ಎಲ್ಲೆಡೆ ಪ್ರತಿಧ್ವನಿಸುತ್ತದೆ.  ಗುರುನಾನಕ್  ದೇವ್ ಜಿ ಅವರು ಲಂಗಾರ್ ಸಂಪ್ರದಾಯವನ್ನು ಪ್ರಾರಂಭಿಸಿದರು. ಕೊರೋನಾವೈರಸ್ ಸಾಂಕ್ರಾಮಿಕ ಕಾಲದಲ್ಲಿ ಜನರಿಗೆ ಆಹಾರವನ್ನು ನೀಡುವ ಈ ಸಂಪ್ರದಾಯವನ್ನು ಸಿಖ್ ಸಮುದಾಯವು ಹೇಗೆ ಮುಂದುವರಿಸಿದೆ ಎಂದು ನಾವು ನೋಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

     ಲಾಕ್‌ಡೌನ್ ಹಂತದಿಂದ ಹೊರಬಂದ ನಂತರ, ಲಸಿಕೆ ಕುರಿತು ಚರ್ಚೆ ಪ್ರಾರಂಭವಾಗಿದೆ. ಆದರೆ ಕೊರೋನ ವೈರಸ್ ನೊಂದಿಗಿನ ಯಾವುದೇ ರೀತಿಯ ಸಡಿಲತೆ ಅಥವಾ ನಿರ್ಲಕ್ಷ್ಯ ಇನ್ನೂ ತುಂಬಾ ಅಪಾಯಕಾರಿ. ನಾವು ವೈರಸ್ ವಿರುದ್ಧ ದೃಢವಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು. ಇದೇ ವೇಳೆ ಹಾಲಿ ರೈತರ ಹೋರಾಟದ ಕುರಿತು ಮಾತನಾಡಿದ ಮೋದಿ ತಮ್ಮ ರೈತರ ಕುರಿತ ಮಸೂದೆಯನ್ನು ಸಮರ್ಥಿಸಿಕೊಂಡರು. ಟ

     ಮಹಾರಾಷ್ಟ್ರದ ಧುಲೇ ಎಂಬ ಗ್ರಾಮದ ರೈತ ಜಿತೇಂದ್ರ ಭೋಜಿ ಈ ಹೊಸ ಕೃಷಿ ಕಾನೂನುಗಳನ್ನು ಹೇಗೆ ಬಳಸಿದ್ದಾರೆಂದು ನೀವು ತಿಳಿದಿರಬೇಕು. ಅವರು ಮೆಕ್ಕೆಜೋಳವನ್ನು ಬೆಳೆದಿದ್ದರು ಮತ್ತು ಅದನ್ನು ಸರಿಯಾದ ಬೆಲೆಗೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದರು. ಮಾರಾಟಕ್ಕೆ ಒಪ್ಪಿದ ಒಟ್ಟು ಮೊತ್ತ ಸುಮಾರು 3.32 ಲಕ್ಷ ರೂ. ಮುಂಚಿತವಾಗಿ (ಅಡ್ವಾನ್ಸ್) 25 ಸಾವಿರ ರೂ. ಅವರು 15 ದಿನಗಳಲ್ಲಿ ಉಳಿದ ಮೊತ್ತವನ್ನು ಪಡೆಯುವು ಕುರಿತು ಒಪ್ಪಂದವಾಯಿತು. ಆದರೆ ರೈತನಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಬಾಕಿ ಹಣ ಪಾವತಿಯಾಗಲಿಲ್ಲ. ಇಂತಹ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಕೃಷಿ ಮಸೂದೆ ಮಾಡಲಾಗಿದೆ. ಹೊಸ ಕಾನೂನಿನ ಪ್ರಕಾರ, 3 ದಿನಗಳಲ್ಲಿ ರೈತರಿಗೆ ಬಾಕಿ ಹಣ ಪಾವತಿಸುವುದು ಕಡ್ಡಾಯವಾಗಿದೆ. ಪಾವತಿ ಮಾಡದಿದ್ದರೆ, ರೈತ ದೂರು ನೀಡಬಹುದು. ಅಂತೆಯೇ ಜಿತೇಂದ್ರ ಬೋಜಿ ಕೂಡ ದೂರು ನೀಡಿ ತಮ್ಮ ಬಾಕಿ ಹಣ ವಾಪಸ್ ಪಡೆದರು ಎಂದು ಮೋದಿ ಹೇಳಿದರು.

    ಸಂಸತ್ತು ಇತ್ತೀಚೆಗೆ ಕಠಿಣ ಸುಧಾರಣೆಯ ನಂತರ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದುಬಿಟ್ಟಿದೆ. ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ ಎಂದು ಮೋದಿ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries