ತಿರುವನಂತಪುರ: ರಾಸಾಯನಿಕ ಪರೀಕ್ಷೆಗಳಲ್ಲಿ ಜವಾನ್ ಮದ್ಯದಲ್ಲಿ ಹೆಚ್ಚಿನ ವಿಷಾಂಶ ಹೊಂದಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ. ಜುಲೈ 20 ನೇ ತಾರೀಕಿನ ಮೂರು ಬ್ಯಾಚ್ ಮದ್ಯ ವನ್ನು ಮಾರಾಟ ಮಾಡದೆ ತಕ್ಷಣ ನಿಲ್ಲಿಸುವಂತೆ ಆದೇಶಿಸಲಾಗಿದೆ.
ರಾಸಾಯನಿಕ ಪರೀಕ್ಷೆಯಲ್ಲಿ ಅದರಲ್ಲಿ ಜೇಡಿ ಮೆಟಲ್ಸ್ (ಮಡ್ಡು) ಇರುವುದು ತಿಳಿದುಬಂದಿದೆ. ಜವಾನ್ ರಮ್ ಅನ್ನು ಕೇರಳ ಸರ್ಕಾರದ ಅಧೀನದಲ್ಲಿರುವ ತಿರುವಾಂಕೂರು ಶುಗರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ತಯಾರಿಸಿದೆ.
ಜುಲೈ 20 ರಂದು ತಯಾರಿಸಿದ್ದ 245, 246 ಮತ್ತು 247 ಬ್ಯಾಚ್‍ಗಳ ಮಾರಾಟವನ್ನು ನಿಷೇಧಿಸಲಾಯಿತು. ಮಾದರಿಯ ಪರೀಕ್ಷೆಯಲ್ಲಿ ಆಲ್ಕೋಹಾಲ್ ಅಂಶವು ಶೇ.39.09 ವಿ / ವಿ ಶೇ.38.31 ವಿ / ವಿ ಶೇ.39.14, ಇತ್ತೆಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಎಲ್ಲಾ ವಿಭಾಗಗಳ ಉಪ ಅಬಕಾರಿ ಆಯುಕ್ತರಿಗೆ ಸೂಚಿಸಲಾಗಿದೆ.





