ತಿರುವನಂತಪುರ: ಅಗತ್ಯವಿದ್ದರೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ರಿಷಿರಾಜ್ ಸಿಂಗ್ ಹೇಳಿದ್ದಾರೆ.
ಸುರೇಂದ್ರನ್ ಅವರು ನಕಲಿ ಸುದ್ದಿ ಹರಡುವುದನ್ನು ನಿಲ್ಲಿಸದಿದ್ದರೆ ಜೈಲು ಇಲಾಖೆ ಕಾನೂನು ಕ್ರಮ ಕೈಗೊಳ್ಳುವ ತಾಕೀತು ನೀಡಲಾಗಿದೆ. ತಿರುವನಂತಪುರ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರನ್ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಳ್ಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ರಿಷಿರಾಜ್ ಸಿಂಗ್ ಹೇಳಿದ್ದಾರೆ.
"ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಹಣಕಾಸು ಸಚಿವ ಥಾಮಸ್ ಐಸಾಕ್ ಸೇರಿದಂತೆ ಹಲವರು ಜೈಲಿನಲ್ಲಿರುವ ಸ್ವಪ್ನಾಳನ್ನು ಭೇಟಿಯಾಗಿದ್ದಾರೆ ಎಂದು ಸುರೇಂದ್ರನ್ ಆರೋಪಿಸಿದ್ದರ ಬೆನ್ನಿಗೆ ಈ ತಾಕೀತು ನೀಡಲಾಗಿದೆ.
ಸುರೇಂದ್ರನ್ ಅವರ ಆರೋಪಗಳನ್ನು ತಿರಸ್ಕರಿಸಿರುವ ರಿಷಿರಾಜ್ ಸಿಂಗ್, ಆರೋಪಿಗಳ ತಾಯಿ, ಮಕ್ಕಳು, ಸಹೋದರ ಮತ್ತು ತನ್ನ ಗಂಡನ ಆಪ್ತ ಸಂಬಂಧಿಕರನ್ನು ಮಾತ್ರ ಸ್ವಪ್ನಾಳ ಭೇಟಿಗೆ ಜೈಲಿಗೆ ಬಂದಿದ್ದರು ಎಂದು ಹೇಳಿದರು. ಕಸ್ಟಮ್ಸ್ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿಯ ಸಮ್ಮುಖದಲ್ಲಿ ಈ ಭೇಟಿ ಮಾಡಿಸಲಾಗಿತ್ತು ಎಂದು ಡಿಜಿಪಿ ಹೇಳಿರುವರು.
ಭೇಟಿಯ ಬಗ್ಗೆ ಅರ್ಜಿ ಸಲ್ಲಿಸಿದ ಬಳಿಕ ಕಸ್ಟಮ್ಸ್ ಅಧಿಕಾರಿಗಳ ಒಪ್ಪಿಗೆ ಮತ್ತು ಉಪಸ್ಥಿತಿಯೊಂದಿಗೆ ಸಂಬಂಧಿಕರು ಬುಧವಾರ ಮಧ್ಯಾಹ್ನ 3 ಗಂಟೆಗೆ ಸ್ವಪ್ನಾಳನ್ನು ಭೇಟಿಯಾಗಿದ್ದರು ಎಂದು ರಿಷಿರಾಜ್ ಸಿಂಗ್ ಹೇಳಿರುವರು.


