HEALTH TIPS

ದಕ್ಷಿಣ ಆಫ್ರಿಕಾ: ಮಹಾತ್ಮ ಗಾಂಧಿ ಮರಿ ಮೊಮ್ಮಗ ಸತೀಶ್ ಕೊರೋನಾಗೆ ಬಲಿ

        ಜೋಹಾನ್ಸ್ ಬರ್ಗ್: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಮರಿ  ಮೊಮ್ಮಗ ಸತೀಶ್ ಧುಪೇಲಿಯಾ ಕೊರೋನಾದಿಂದ ಸಾವನ್ನಪ್ಪಿದ್ದಾರೆ.  ನಾಲ್ಕು ದಿನಗಳ ಹಿಂದೆ ಸತೀಶ್ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

       ನ್ಯೂಮೋನಿಯಾದಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸತೀಶ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸತೀಶ್ ಅವರ ಸಹೋದರಿ ಉಮಾ ಧುಪೇಲಿಯಾ ಸ್ಪಷ್ಟಪಡಿಸಿದ್ದಾರೆ.

ನ್ಯುಮೋನಿಯಾ ಕಾರಣದಿಂದ ಒಂದು ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನನ್ನ ಸಹೋದರ ಸತೀಶ್ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು   ಸೋಷಿಯಲ್ ಮೀಡಿಯಾ ಪೆÇಸ್ಟ್ ನಲ್ಲಿ ಹಾಕಿಕೊಂಡಿದ್ದಾರೆ.ಉಮಾ ಜೊತೆಗೆ, ಧುಪೆಲಿಯಾ ಜೋಹಾನ್ಸ್‍ಬರ್ಗ್‍ನಲ್ಲಿ ವಾಸಿಸುತ್ತಿರುವ ಕೀರ್ತಿ ಮೆನನ್ ಎಂಬ ಇನ್ನೊಬ್ಬ ಸಹೋದರಿಯನ್ನು ಅಗಲಿದ್ದಾರೆ. ಕೀರ್ತಿ ಅವರು ಗಾಂಧಿಯ ಸ್ಮರಣೆಯನ್ನು ಗೌರವಿಸುವ ವಿವಿಧ ಯೋಜನೆಗಳಲ್ಲಿ ಸಕ್ರಿಯರಾಗಿದ್ದಾರೆ.

       ತನ್ನ ಜೀವನದ ಬಹುಪಾಲು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೋಗ್ರಾಫರ್ ಮತ್ತು ಛಾಯಾಗ್ರಾಹಕನಾಗಿ ಕಳೆದ ಧುಪೆಲಿಯಾ, ಡರ್ಬನ್  ನ ಬಳಿಯ ಫೀನಿಕ್ಸ್ ಸೆಟಲ್ ಮೆಂಟ್ ನಲ್ಲಿ ಮಹಾತ್ಮರು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಗಾಂಧಿ ಅಭಿವೃದ್ಧಿ ಟ್ರಸ್ಟ್ಗೆ ಸಹಾಯ ಮಾಡುವಲ್ಲಿ ತುಂಬಾ ಸಕ್ರಿಯರಾಗಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries