ಉಪ್ಪಳ: ವೃಶ್ಚಿಕ ಸಂಕ್ರಮಣದ ಪ್ರಯುಕ್ತ ಇಂದು ಹಿರಣ್ಯ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಮುಂಜಾನೆಯಿಂದ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ.
ಬೆಳಿಗ್ಗಿನಿಂದ ಪೂಜಾ ವಿಧಿಗಳು ಆರಂಭವಾಗಿ, ಸಂಜೆ ಭಜನೆ, ದುರ್ಗಾಪೂಜೆ ನಡೆಯಲಿದೆ. ಬಳಿಕ ಅನ್ನಪ್ರಸಾದ ನಡೆಯಲಿದೆ. ಭಕ್ತಾಭಿಮಾನಿಗಳು ಹೂ ಹಣ್ಣು ಕರ್ಪೂರ ತೆಂಗಿನಎಣ್ಣೆ ಸೀಯಾಳ ಸಿಂಗಾರ ಬಾಳೆಹಣ್ಣು ದೀಪದ ಎಣ್ಣೆ ಹೂ ಬತ್ತಿ ತುಪ್ಪ ಕುಂಕುಮ ಮಜ್ಜಿಗೆ ಇತ್ಯಾದಿ ಯಥಾನುಶಕ್ತಿ ಸಲ್ಲಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.




