ಮಂಜೇಶ್ವರ: ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲೇ ಇದ್ದಾಗ, ಇಲ್ಲೊಂದು ತಂಡ ಕಿರುಚಿತ್ರವನ್ನು ನಿರ್ಮಿಸಿ ಬಿಡುಗಡೆಗೊಳಿಸಿ ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿ ಸದ್ದು ಮಾಡುತ್ತಿದ್ದಾರೆ.
ಕುಳೂರು ಕ್ರಿಯೇಷನ್ ಎಂಬ ಬ್ಯಾನರ್ ಅಡಿಯಲ್ಲಿ, ಮೋಹನ್ ಶೆಟ್ಟಿ ಮಜ್ಜಾರ್ ನಿರ್ಮಾಣದ ಬಹು ನಿರೀಕ್ಷಿತ 'ಕಂಟಕ' ಕಿರುಚಿತ್ರವು ಮಕ್ಕಳ ದಿನಾಚರಣೆ ಮತ್ತು ದೀಪಾವಳಿಯ ಶುಭ ದಿನದಂದು ಬಿಡುಗಡೆಗೊಂಡು ಅಪಾರ ಜನಮನ್ನಣೆಯನ್ನು ಗಳಿಸುತ್ತಿದೆ. ಈ ಕಿರುಚಿತ್ರವನ್ನು ಸೈಮಾ ಫಿಲಂ ಅವಾರ್ಡ್ ವಿಜೇತ, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ಬಿಡುಗಡೆಗೊಳಿಸುವ ಮೂಲಕ ಅನೇಕ ದಿನಗಳ ಕಾತುರತೆಗೆ ತೆರೆ ಎಳೆದಿದ್ದಾರೆ.
ಬಿಡುಗಡೆಯ ಸಮಾರಂಭದಲ್ಲಿ ಕಿರುಚಿತ್ರದ ಸಂಭಾಷಣೆ ಮತ್ತು ನಿರ್ದೇಶನವನ್ನು ಮಾಡಿದ ಪುಷ್ಪರಾಜ್ ಶೆಟ್ಟಿ ಕುಳೂರು, ಕಥೆ ರಚನೆಕಾರ ಜಯರಾಜ್ ಶೆಟ್ಟಿ ಚಾರ್ಲ, ಛಾಯಾಗ್ರಹಣ ಮತ್ತು ಸಂಕಲನಕಾರ ಬಾತು ಕುಲಾಲ್, ಚಿತ್ರಕಥೆ ಮತ್ತು ಎಸೋಸಿಯೇಟ್ ಡೈರೆಕ್ಟರ್ ಕಾರ್ಯ ನಿರ್ವಹಿಸಿದ ಶಶಿಕುಮಾರ್ ಕುಳೂರು, ಪೆÇ್ರಡಕ್ಷನ್ ಮೆನೇಜರ್ ಜಯಪ್ರಶಾಂತ್ ಪಾಲೆಂಗ್ರಿ, ಮುಖ್ಯ ಪಾತ್ರ ವಹಿಸಿದ ಪದ್ಮನಾಭ ತೂಮಿನಾಡು, ಹರಿರಾಮ ಕುಳೂರು, ಶೈಲು ಶೆಟ್ಟಿ ಕೋಡಿಬೈಲ್ ಮುಂತಾದವರು ಉಪಸ್ಥಿತರಿದ್ದರು.






