HEALTH TIPS

ನಿರ್ಭಯಾ ಕೇಂದ್ರಗಳು ರಾಜ್ಯಾದ್ಯಂತ ಮುಚ್ಚುಗಡೆ!-ಇನ್ನು ತ್ರಿಶೂರ್‍ನಲ್ಲಿ ಮಾತ್ರ ಏಕೈಕ ಕೇಂದ್ರ

            ತಿರುವನಂತಪುರ: ರಾಜ್ಯದ 13 ಜಿಲ್ಲೆಗಳಲ್ಲಿರುವ ನಿರ್ಭಯ ಕೇಂದ್ರಗಳನ್ನು  ಮುಚ್ಚಲು ಸರ್ಕಾರ ಸಿದ್ಧತೆ ನಡೆಸಿದೆ ಎಮದು ತಿಳಿದುಬಂದಿದೆ. ಮುಂದೆ ತ್ರಿಶೂರ್‍ನ ನಿರ್ಭಯಾ ಹೋಮ್ಸ್ ಮಾತ್ರ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ, ಪೆÇಕ್ಸೊ ಪ್ರಕರಣದ ಸಂತ್ರಸ್ತರ ಪುನರ್ವಸತಿ ಬಿಕ್ಕಟ್ಟಿನಲ್ಲಿದೆ.

          ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕೆಯಲ್ಲಿರುವ ನಿರ್ಭಯ ಕೇಂದ್ರಗಳು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂತಹ ಉಪಕ್ರಮಗಳಿಗೆ ಚಿಂತಿಸಿರುವುದಾಗಿ ಹೇಳಲಾಗಿದೆ. ಮುಚ್ಚಲ್ಪಡುವ ನಿರ್ಭಯಾ ಕೇಂದ್ರಗಳಿಂದ ಪೆÇೀಕ್ಸೋ ಪ್ರಕರಣ ಸಂತ್ರಸ್ತರನ್ನು ತ್ರಿಶೂರ್‍ಗೆ ಸ್ಥಳಾಂತರಿಸಲಾಗುವುದು.

ವಿವಿಧ ಜಿಲ್ಲೆಗಳ ನಿರ್ಭಯಾ ಕೇಂದ್ರಗಳ ಭೌತಿಕ ಸ್ಥಿತಿ ಹದಗೆಟ್ಟಿದ್ದು, ಸಂತ್ರಸ್ತರನ್ನು ತ್ರಿಶೂರ್‍ನ ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ವಿಭಾಗದ ಕಾರ್ಯದರ್ಶಿ ಬಿಜು ಪ್ರಭಾಕರ್ ತಿಳಿಸಿದ್ದಾರೆ.

         2012 ರಲ್ಲಿ ಅಂದಿನ ಯುಡಿಎಫ್ ಸರ್ಕಾರವು ಪತ್ತನಂತಿಟ್ಟು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಿತ್ತು. ಎಲ್ಲಾ 13 ಜಿಲ್ಲೆಗಳಲ್ಲಿ ನಿರ್ಭಯಾ ಕೇಂದ್ರಗಳು  ಇರುವುದರಿಂದ, ಪೆÇೀಕ್ಸೊ ಪ್ರಕರಣಗಳಿಗೆ ಬಲಿಯಾದವರು ತಮ್ಮದೇ ಜಿಲ್ಲೆಗಳಲ್ಲಿ ಉಳಿಯಲು ಸಾಧ್ಯವಾಗುತ್ತಿತ್ತು.

        ಮುಚ್ಚಲಾಗು ನಿರ್ಭಯಾ ಕೇಂದ್ರಗಳು ಇನ್ನು ಪ್ರಾಥಮಿಕ ಕೇಂದ್ರಗಳಷ್ಟೇ ಆಗಿ ಉಯಳಿಯಲಿವೆ.  ಪ್ರಕರಣವನ್ನು ಇಲ್ಲಿ ದಾಖಲಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಅವರನ್ನು ತ್ರಿಶೂರ್‍ಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕೃತರು ತಿಳಿಸಿರುವರು. ಈ ಮೂಲಕ ಪ್ರತಿತಿಂಗಳು ಭರಿಸುವ 78 ಲಕ್ಷಕ್ಕಿಂತಲೂ ಮಿಕ್ಕಿದ ಧನ ಉಳಿತಾಯವಾಗುವುದೆಂದು ಸರ್ಕಾರ ಅಂದಾಜಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries