ತಿರುವನಂತಪುರ: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿ ಚುನಾವಣಾ ಅಧಿಕಾರಿಗಳು ಕೋವಿಡ್ ರೋಗಿಗಳ ಮನೆಗಳಿಗೆ ಭೇಟಿ ನೀಡಿ ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸುವರೆಂದು ಆಯೋಗ ಹೇಳಿದೆ. ಆಯೋಗವು ರೋಗಿಗಳಿಗೆ ಮತ್ತು ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಕೋವಿಡ್ ನಿರೀಕ್ಷಣೆಯಲ್ಲಿರುವವರ ಮತ ಪಡೆಯಲು ಈ ಹೊಸ ವಿಧಾನ ಅಳವಡಿಸಲಿದ್ದಾರೆ. ಅಂಚೆ ಮತದಾನಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ಹೇಳಿದ್ದಾರೆ.
ಕೋವಿಡ್ ರೋಗಿಗಳಿಗೆ ಅಂಚೆ ಮತದಾನವನ್ನು ಘೋಷಿಸಿದ್ದು, ಆದರೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಗೊಂದಲಗಳು ಏರ್ಪಟ್ಟಿದ್ದವು. ಇದಕ್ಕೆ ಪರಿಹಾರವಾಗಿ ಅಧಿಕಾರಿಗಳು ರೋಗಿಗಳ ಮನೆಮನೆಗಳಿಗೆ ತೆರಳಿ ಮತಗಳನ್ನು ನೋಂದಾಯಿಸಲು ನಿರ್ಧರಿಸಿದರು. ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ಅವರು ಮತದಾನಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಹೇಳಿರುವರು.





