ತಿರುವನಂತಪುರ: ಕಿಫ್ಬಿಯ ವಿರುದ್ದ ಕಂಡುಬಂದ ವಂಚನೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಮಸಾಲಾ ಬಾಂಡ್‍ನ ವಿವರಗಳನ್ನು ಕೋರಿ ಇಡಿ ಆರ್‍ಬಿಐಗೆ ಪತ್ರ ಬರೆದಿದೆ. ಸಿಎಜಿ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಸಿಎಜಿ ವರದಿಯ ಪ್ರಕಾರ, ಕಿಫ್ಬಿಯ ಸಾಲಕ್ಕೆ ಇದುವರೆಗೆ ಸರ್ಕಾರ 3,100 ಕೋಟಿ ರೂ. ವ್ಯಯಿಸಿರುವುದು ಸಿಐಜಿ ವರದಿಯಲ್ಲಿ ಉಲ್ಲೇಖಗೊಂಡಿದೆ. ಆದರೆ, ವರದಿಯಲ್ಲಿನ ಕೆಲವು ಪುಟಗಳನ್ನು ಬಳಿಕ ಬರೆದು ಸೇರಿಸಲಾಗಿದೆಯೆಂದೂ ಅಸಂವಿಧಾನಿಕವಾಗಿ ಏನನ್ನೂ ಮಾಡಿಲ್ಲ ಎಂದು ಸರ್ಕಾರ ವಾದಿಸಿದೆ. ಫೆಮಾ ಕಾಯ್ದೆಯ ಉಲ್ಲಂಘನೆ ನಡೆದಿದೆಯೇ ಎಂದು ಇಡಿ ಮುಖ್ಯವಾಗಿ ಪರಿಶೀಲಿಸುತ್ತದೆ.
ಕೇಂದ್ರ ಸರ್ಕಾರವು ಸೆಪ್ಟೆಂಬರ್‍ನಲ್ಲಿ ಕಿಬ್ಬಿ ವಿರುದ್ಧ ಇ.ಡಿ ತನಿಖೆಯನ್ನು ಘೋಷಿಸಿತ್ತು. 250 ಕೋಟಿ ರೂ.ಯೆಸ್ ಬ್ಯಾಂಕ್‍ನಲ್ಲಿ ನಿಕ್ಷೇಪಿಸಿರುವುದಕ್ಕೆ ಸಂಬಂಧಿಸಿ ಹೊಸ ತನಿಖೆ ಪ್ರಗತಿಯಲ್ಲಿದೆ.ಈ ಮಧ್ಯೆ ಹೊಸ ವಿವಾದ ಹುಟ್ಟಿಕೊಂಡಿರುವುದಾಗಿದೆ.
ಈ ಮಧ್ಯೆ, ಹಣಕಾಸು ಸಚಿವ ಥಾಮಸ್ ಐಸಾಕ್, ಸಿಎಜಿ ವರದಿ ನಿಖರವಾದ ಮಾಹಿತಿ ಅಲ್ಲ ಎಂದು ಹೇಳಿರುವರು. ಕೇರಳದ ಪರಿಸ್ಥಿತಿ ಕಳವಳಕಾರಿಯಾಗಿದ್ದು ಸರ್ಕಾರವನ್ನು ಉರುಳಿಸಲು ಸಿಎಜಿ ಸ್ವತಃ ಇಳಿದಿದೆ ಎಂದು ಸಚಿವರು ಹೇಳಿರುವರು. ಅಂತಿಮ ವರದಿಯ ನಾಲ್ಕನೇ ಪುಟವು ಕರಡು ವರದಿಯಲ್ಲಿ ಏನು ಹೇಳಿಲ್ಲ ಎಂದು ಹೇಳುತ್ತದೆ. 'ಬಿಜೆಪಿಯ ಜೊತೆಯಲ್ಲಿ ಪ್ರತಿಪಕ್ಷಗಳು ಇಡಿ ಜೊತೆ ಕಿಬ್ಬಿಯನ್ನು ಮಣ್ಣುಮುಕ್ಕಿಸಲು ಹೊರಟಿದೆ. ಪ್ರತಿಪಕ್ಷದ ನಾಯಕ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಥಾಮಸ್ ಐಸಾಕ್ ಹೇಳಿರುವರು.





