ಬದಿಯಡ್ಕ: ನೀರಿನ ಸ್ಥಿರತೆಗೆ ಕಟ್ಟವೊಂದೇ ಮಾರ್ಗ. ಅದೊಂದು ಸಂಸ್ಕøತಿ ಎಂದು ನೀರ ನೆಮ್ಮದಿಯತ್ತ ಪಡ್ರೆ(ನೀನೆಪ)ಗುಂಪಿನ ಅಧ್ಯಕ್ಷ ಶ್ರೀಹರಿ ಭಟ್ ಸಜಂಗದ್ದೆ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಡಾ.ವೇಣುಗೋಪಾಲ್ ಕಳೆಯತ್ತೋಡಿ ಅವರ ಗ್ರೀನ್ ವ್ಯೂ ನಿವಾಸದಲ್ಲಿ ಜರಗಿದ ಕಟ್ಟದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪಡ್ರೆಯಲ್ಲಿ ತಾವು ಕೈಗೊಂಡ ಕಾರ್ಯಗಳ ವಿವರ ನೀಡಿದರು. ಖರ್ಚು ಕಡಿಮೆ ಮಾಡುವುದು, ಅಪಾಯ ಮತ್ತು ನಿರ್ವಹಣೆ ಈ ಮೂರು ಗಮನಿಸಬೇಕಾದ ಅಂಶಗಳು ಎಂದರು.
ಇನ್ನೋರ್ವ ಅತಿಥಿ, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಮಾತನಾಡಿ ಕಟ್ಟದ ಫಲಾನುಭವಿಗಳ ಸಂಘಟನೆ ಅಗತ್ಯ ಎಂದರು. ಅದಕ್ಕಾಗಿ ಒಂದು ವಾಟ್ಸಾಪ್ ಗುಂಪನ್ನು ರಚಿಸಬೇಕು. ಸಂವಹನವನ್ನು ಚಾಲೂ ಇಡಬೇಕು ಎಂದು ಹೇಳಿದರು. ವಿವಿಧ ರೀತಿಯ ಕಟ್ಟಗಳ ಕುರಿತು ವಿವರಣೆ ನೀಡಿದರು.
ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಮಾರು ಹನ್ನೆರಡು ಕಟ್ಟಗಳ ಪಾಲುದಾರರು ಭಾಗವಹಿಸಿ ವಿಚಾರ ವಿನಿಮಯ ಮಾಡಲಾಯಿತು. ಅತಿಥಿಗಳಿಗೆ ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೈಷ್ಣವಿ, ಅತ್ರೇಯಿ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಡಾ.ವೇಣುಗೋಪಾಲ್ ಸ್ವಾಗತಿಸಿ, ಉಪಾಧ್ಯಕ್ಷ ವೈ.ಕೆ. ಗಣಪತಿ ಭಟ್ ವಂದಿಸಿದರು. ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಏತಡ್ಕ ಕಾರ್ಯಕ್ರಮ ನಿರ್ವಹಿಸಿದರು.





