ತಿರುವನಂತಪುರ: ನವೆಂಬರ್ ತಿಂಗಳ ಪಿಂಚಣಿ ವಿತರಣೆ ನಿನ್ನೆಯಿಂದ ಪ್ರಾರಂಭವಾಗಿದೆ. ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಅವರು ನೀಡಿರುವ ಹೇಳಿಕೆಯಂತೆ ಈ ತಿಂಗಳು 46.15 ಲಕ್ಷ ಜನರಿಗೆ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು 6.32 ಲಕ್ಷ ಜನರಿಗೆ ಕಲ್ಯಾಣ ಮಂಡಳಿಗಳ ಮೂಲಕ ಪಿಂಚಣಿ ಸಿಗಲಿದೆ. ಸರ್ಕಾರದ 100 ದಿನಗಳ ಕಾರ್ಯಯೋಜನೆಯಲ್ಲಿ ಅತ್ಯಂತ ಜನಪ್ರಿಯವಾದದ್ದು ಪಿಂಚಣಿ 100 ರೂ.ಗಳ ಹೆಚ್ಚಳ ಮತ್ತು ಅವುಗಳನ್ನು ಮಾಸಿಕ ಆಧಾರದ ಮೇಲೆ ವಿತರಿಸುವ ನಿರ್ಧಾರ ಎಂದು ಅವರು ತಮ್ಮ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.
2016 ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸುಮಾರು 19 ತಿಂಗಳ ಪಿಂಚಣಿ ಬಾಕಿ ಇತ್ತು. ಅದು ಹೇಗೆ ವಿತರಿಸಬೇಕೆಂದು ತಿಳಿಯದ ಪರಿಸ್ಥಿತಿ ಖಜಾನೆಯದ್ದಾಗಿತ್ತು. ಸಾಮಾಜಿಕ ಭದ್ರತಾ ಪಿಂಚಣಿ ವಿತರಣೆ ಸಾರ್ವಕಾಲಿಕ ಕಡಿಮೆ ಇತ್ತು. ಆದೇಶವನ್ನು ಮಾಡಲು ಸಾಕಷ್ಟು ಶ್ರಮ ಬೇಕಾಯಿತು. ನಿರ್ಧರಿಸುವ ಕ್ಷಣದಲ್ಲಿ, ಕೇರಳವು ಸುಸಂಘಟಿತ ಮತ್ತು ನಿಖರವಾದ ವ್ಯವಸ್ಥೆಯನ್ನು ಹೊಂದಿದೆ ಎಂದು ನಾವು ಹೇಳಬಲ್ಲೆವು, ಅದು ಕಲ್ಯಾಣ ಪಿಂಚಣಿದಾರರು ಸೇರಿದಂತೆ 53 ಲಕ್ಷಕ್ಕೂ ಹೆಚ್ಚು ಜನರಿಗೆ ಹಣವನ್ನು ವಿತರಿಸಲು ಈಗ ಸಾಧ್ಯವಾಗುತ್ತಿದೆ. ಪಿಂಚಣಿಯನ್ನು 600 ರೂ.ನಿಂದ 1400 ರೂ.ಗೆ ಹೆಚ್ಚಿಸಲಾಗಿದೆ. ಯುಡಿಎಫ್ ಅವಧಿಯಲ್ಲಿ, ಪಿಂಚಣಿದಾರರ ಸಂಖ್ಯೆ 34,43,000 ಆಗಿತ್ತು. ಈ ತಿಂಗಳು, ಕಲ್ಯಾಣ ಪಿಂಚಣಿ ಸೇರಿದಂತೆ 52.47 ಲಕ್ಷ ಜನರಿಗೆ ಪಿಂಚಣಿ ಕಳುಹಿಸಲಾಗುತ್ತಿದೆ. ಬ್ಯಾಂಕ್ ಖಾತೆಗಳು ಮತ್ತು ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ದೋಷರಹಿತ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಪಾವತಿಸಿದ ಒಟ್ಟು ಪಿಂಚಣಿ `9311 ಕೋಟಿ. ರೂಗಳಾಗಿದ್ದರೆ ಎಲ್‍ಡಿಎಫ್ ಈ ತಿಂಗಳಲ್ಲಿ ಮಾತ್ರ 27,378 ಕೋಟಿ ರೂ.ಗಳನ್ನು ವಿತರಿಸಿದೆ ಎಂದಿರುವರು.


