ಕೊಚ್ಚಿ: ಕಳೆದ ಎರಡು ಚುನಾವಣೆಗಳಲ್ಲಿ ಮೀಸಲಾತಿ ವಿಭಾಗಕ್ಕೆ ನೀಡಲ್ಪಟ್ಟ ಸ್ಥಳಿಯಾಡಳಿತಗಳ ಅಧ್ಯಕ್ಷ ಸ್ಥಾನವನ್ನು ಕ್ರಮೀಕರಿಸಿ ಸಾಮಾನ್ಯ ವಿಭಾಗವಾಗಿಸಬೇಕು ಎಂಬ ಹೈಕೋರ್ಟ್‍ನ ಏಕ ಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಮತ್ತು ಚುನಾವಣಾ ಆಯೋಗ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಅರ್ಜಿಯನ್ನು ಮುಂದಿನ ಬುಧವಾರ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಲಿದೆ.
ಹೈಕೋರ್ಟ್‍ನ ಆದೇಶವು ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ಅರ್ಜಿಗಳು ಆರೋಪಿಸಿವೆ. ಹೈಕೋರ್ಟ್‍ನ ಏಕ ಪೀಠದ ಆದೇಶವು ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಹೊರಬಿದ್ದಿದೆ. ತನ್ನ ನಿಲುವನ್ನು ತಿಳಿಸುವ ಪ್ರತಿ ಅಫಿಡವಿಟ್ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.


