HEALTH TIPS

ಆಡಿಯೊ ರೆಕಾರ್ಡಿಂಗ್ ಪ್ರಕರಣ: ಕ್ರೈಂ ಬ್ರಾಂಚ್ ತನಿಖೆಗೆ ಹಸ್ತಾಂತರ- ಇ.ಡಿ.ನಿರ್ದೇಶನದ ಮೇರೆಗೆ ಕ್ರಮ

   

       ತಿರುವನಂತಪುರ: ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಳದು ಎಂದು ಹೇಳಲಾದ ಧ್ವನಿ ಸಂದೇಶ ಬಿಡುಗಡೆ ಮಾಡಿದ ಘಟನೆಯ ಬಗ್ಗೆ ಅಪರಾಧ ವಿಭಾಗ ತನಿಖೆ ನಡೆಸಲಿದೆ. ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿರುವರು. ಅಪರಾಧ ವಿಭಾಗದ ವಿಶೇಷ ತನಿಖಾ ತಂಡವು ತನಿಖೆಯ ಉಸ್ತುವಾರಿ ವಹಿಸಲಿದೆ.

        ಆಡಿಯೋ ರೆಕಾಡಿರ್ಂಗ್ ಸೋರಿಕೆಯಾದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ ಜೈಲು ಮುಖ್ಯಸ್ಥರಿಗೆ ಸೂಚಿಸಿತ್ತು. ಇದರೊಂದಿಗೆ, ತನಿಖೆ ನಡೆಸಲು ಅಪರಾಧ ಶಾಖೆಯನ್ನು ನಿಯೋಜಿಸಲಾಯಿತು. ಇದಕ್ಕೂ ಮೊದಲು ಪೆÇಲೀಸರು ವಿಚಾರಣೆಯ ಅಗತ್ಯವಿಲ್ಲ ಎಂದು ಹೇಳಿದ್ದರು.

        ಧ್ವನಿ ಸಂದೇಶ ಹರಡಿದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಜೈಲಿನ ಮುಖ್ಯಸ್ಥ ಡಿಜಿಪಿಗೆ ಪತ್ರ ಹಸ್ತಾಂತರಿಸಿದ್ದರು. ಇಡಿ ಅಧಿಕಾರಿಗಳ  ಆರಂಭಿಕ ಪತ್ರಕ್ಕೆ ಜೈಲು ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರೊಂದಿಗೆ ಇಡಿ ಶನಿವಾರ ಸಂಜೆ ಜೈಲಿನ ಡಿಜಿಪಿಗೆ ಎರಡನೇ ಪತ್ರವನ್ನು ಸಲ್ಲಿಸಿತ್ತು. ಇದರೊಂದಿಗೆ ಪ್ರಾಥಮಿಕ ತನಿಖೆಯನ್ನು ಅಪರಾಧ ಶಾಖೆಗೆ ಹಸ್ತಾಂತರಿಸಲಾಯಿತು. ಆಡಿಯೊ ರೆಕಾಡಿರ್ಂಗ್ ಸೋರಿಕೆಯ ಹಿಂದೆ ಪಿತೂರಿ ಇದೆ ಎಂದು ಇಡಿ ಅಭಿಪ್ರಾಯಪಟ್ಟಿದೆ.

       ಮುಖ್ಯಮಂತ್ರಿ ಪಿಣರಾಯಿ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯ?:

   ಸ್ವಪ್ನಾಳ ಹೆಸರಿನಲ್ಲಿ ಧ್ವನಿ ಸಂದೇಶ ಹೊರಬಂದಿದೆ. ಇದರೊಂದಿಗೆ, ಧ್ವನಿ ಸಂದೇಶ ಹೇಗೆ ಹೊರಬಂದಿದೆ ಎಂದು ವಿವರಿಸಲು ಜೈಲು ಮುಖ್ಯಸ್ಥ ಡಿಜಿಪಿಗೆ ವಿವರವಾದ ವಿಚಾರಣೆ ನಡೆಸುವಂತೆ ಕೇಳಿಕೊಂಡಿರುವರು. ಧ್ವನಿ ತನ್ನದು ಹೌದೆಂದು ಸ್ವಪ್ನಾ ಋಜುಪಡಿಸಿದ್ದರೂ ಧ್ವನಿ ಎಲ್ಲಿ ದಾಖಲಿಸಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿಲ್ಲ.

        ಏತನ್ಮಧ್ಯೆ, ಚಿನ್ನ ಸಾಗಾಣಿಕೆ ತನಿಖೆಯನ್ನು ತಪ್ಪುದಾರಿಗೆಳೆಯಲು ಧ್ವನಿ ಸಂದೇಶ ಸೋರಿಕೆಯಾಗಿದೆ ಎಂದು ಇಡಿ ಶಂಕಿಸಿದೆ. ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದರೆ ಕ್ಷಮೆಯಾಚಿಸಬಹುದು ಎಂದು ತನಿಖಾ ಸಂಸ್ಥೆ ತಿಳಿಸಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries