ಕೋಝಿಕ್ಕೋಡ್: ಬ್ರಿಟನ್‍ನಿಂದ ಕೇರಳಕ್ಕೆ ಆಗಮಿಸಿದ್ದ ಎಂಟು ಜನರಿಗೆ ಕೋವಿಡ್ ಸಕಾರಾತ್ಮಕವಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ನಿನ್ನೆ ಹೇಳಿದ್ದಾರೆ. ಯುಕೆಯಲ್ಲಿ ದೃಢೀಕರಿಸಲ್ಪಟ್ಟ ಸ್ಥಳೀಯವಾಗಿ ಮಾರ್ಪಟ್ಟಿರುವ ವೈರಸ್ ಸೋಂಕು ಇದಾಗಿದೆಯೇ ಎಂದು ಪತ್ತೆಹಚ್ಚಲು ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿದೆ ಎಮದು ಸಚಿವೆ ತಿಳಿಸಿದರು.
ಪುಣೆಯ ಫಲಿತಾಂಶದ ಆಧಾರದ ಮೇಲೆ ಮಾತ್ರ ಹೊಸ ರೂಪಾಂತರವಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಸಾಧ್ಯವಾಗುತ್ತದೆ ಎಂದು ಶೈಲಾಜಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಆರೋಗ್ಯ ಸಚಿವರು ವಿಮಾನ ನಿಲ್ದಾಣಗಳತ್ತ ಗಮನ ಹರಿಸಲಾಗುತ್ತಿದೆ ಎಮದರು. ಪ್ರಸ್ತುತ ಲಸಿಕೆ ಸ್ಥಳೀಯವಾಗಿ ಮಾರ್ಪಡಿಸಿದ ವೈರಸ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡುಬರಲಿದೆ ಎಂದು ಕೆ.ಕೆ. ಶೈಲಾಜಾ ಎಚ್ಚರಿಕೆ ನೀಡಿದರು. ಯುಕೆಯಿಂದ ಆಗಮಿಸುವ ಪ್ರತಿಯೊಬ್ಬರನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಹೊಸ ರೂಪಾಂತರದ ಸೋಂಕು ಹರಡುವ ಮೊದಲು ಊರಿಗೆ ಮರಳಿದವರ ಮೇಲೂ ನಿಗಾ ವಹಿಸುತ್ತಿರುವುದಾಗಿ ಸಚಿವರು ಹೇಳಿದರು. ಆದರೆ ಆನುವಂಶಿಕ ರೂಪಾಂತರಕ್ಕೆ ಕಾರಣವಾದ ಅದೇ ಸರಣಿಯ ವೈರಸ್‍ಗಳು ಇಲ್ಲಿಯೂ ಕಂಡುಬಂದಿವೆ ಎಂದು ಪತ್ತೆಹಚ್ಚಲು ಸಂಶೋಧನೆ ನಡೆಯುತ್ತಿದೆ ಎಂದರು.
ಕೆಲವು ಸ್ಥಳೀಯವಾಗಿ ಮಾರ್ಪಡಿಸಿದ ವೈರಸ್ ಗಳು ಅಪಾಯಕಾರಿಯಲ್ಲದೆ ಇರಬಹುದು. ಮತ್ತೆ ಕೆಲವು ಅಪಾಯಕಾರಿಯಾಗಬಹುದು. ಇದನ್ನು ತಡೆಯಲು ಹೆಚ್ಚು ಜಾಗರೂಕರಾಗಿರುವುದು ಸೂಕ್ತ. ನಾವು ಒಟ್ಟಾಗಿ ವೈರಸ್ ವಿರುದ್ಧ ಹೋರಾಡಬೇಕು ಎಂದು ಆರೋಗ್ಯ ಸಚಿವರು ಹೇಳಿರುವರು.





