HEALTH TIPS

ಬುರೆವಿ ಚಂಡಮಾರುತ: ಕೇರಳದ ಐದು ಜಿಲ್ಲೆಗಳಲ್ಲಿ ಶುಕ್ರವಾರ ರಜೆ ಘೋಷಣೆ, ಟ್ಯುಟಿಕೋರಿನ್ ಏರ್ ಪೋರ್ಟ್ ಸ್ಥಗಿತ

         ತಿರುವನಂತಪುರ: ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಶುಕ್ರವಾರ ಐದು ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆಯನ್ನು ಕೇರಳ ಸರ್ಕಾರ ಘೋಷಿಸಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟು , ಅಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಜೆಯನ್ನು ಘೋಷಿಸಲಾಗಿದೆ.

        ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಟ್ಯುಟಿಕೋರಿನ್ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಚ್ಚಲಾಗಿದೆ.  ಮಧ್ಯಾಹ್ನದ ನಂತರ ನಾಲ್ಕು ದೇಶಿಯ ವಿಮಾನಗಳು ಸೇವೆ ಕಲ್ಪಿಸಲಿವೆ. ಆದಾಗ್ಯೂ, ಮಧ್ಯಾಹ್ನ ಉಂಟಾಗುವ ಚಂಡಮಾರುತದ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು, ಇಲ್ಲಿಯವರೆಗೂ ವಿಮಾನಗಳ ಸೇವೆ ರದ್ದುಗೊಂಡಿಲ್ಲ, ಆದರೆ, ಸೇವೆಯಲ್ಲಿ ವಿಳಂಬವಾಗಬಹುದು ಎಂದು ಮೂಲಗಳು ಹೇಳಿವೆ.

     ಚಂಡುಮಾರುತದ ಕಾರಣ ತೀವ್ರ ಮಳೆ ಮತ್ತು ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕೇರಳದ ಪ್ರಮುಖ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ದಕ್ಷಿಣ ತಮಿಳುನಾಡಿಗೆ ಗುರುವಾರ ರಾತ್ರಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ತಿರುವನಂತಪುರಂನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

     ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಜೆಯ ಎಂಟು ತಂಡಗಳನ್ನು ಮಧ್ಯ ಮತ್ತು ದಕ್ಷಿಣ ಕೇರಳದಲ್ಲಿ ನಿಯೋಜಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries