ತ್ರಿಶೂರ್: ತ್ರಿಶೂರ್‍ನಲ್ಲಿ ಕೌನ್ಸಿಲರ್ ಸೇರಿದಂತೆ ಒಂಬತ್ತು ಜನರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಪಕ್ಷವನ್ನು ಪರಾಭವಗೊಳಿಸಲು ಪ್ರಯತ್ನಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಉಚ್ಚಾಟನೆಗೊಂಡ ಒಂಬತ್ತು ಮಂದಿಯಲ್ಲಿ ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯದರ್ಶಿ ಕೆ. ಕೇಶವದಾಸ್ ಮತ್ತು ಮಾಜಿ ನಗರಸಭಾ ಕೌನ್ಸಿಲರ್ ಲಲಿತಾಂಬಿಕಾ ಸೇರಿದ್ದಾರೆ. ಶಿಸ್ತು ಕ್ರಮ ಆರು ವರ್ಷಗಳವರೆಗಿರಲಿದೆ. ತೊಟ್ಟಾ ವಾರ್ಡ್‍ನಲ್ಲಿ ಲಲಿತಾಂಬಿಕಾ ಸಿಟ್ಟಿಂಗ್ ಕೌನ್ಸಿಲರ್ ಆಗಿದ್ದರು ಎಂದು ಬಿಜೆಪಿ ರಾಜ್ಯ ವಕ್ತಾರ ಬಿ ಗೋಪಾಲಕೃಷ್ಣನ್ ಹೇಳಿದ್ದಾರೆ.
ಕುಟ್ಟಂಕುಲಂಗರದಲ್ಲಿನ ಸೋಲಿಗೆ ತಾನೇ ಕಾರಣ ಎಂದು ಗೋಪಾಲಕೃಷ್ಣನ್ ಮತ್ತು ಅವರ ತಂಡ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ಕೇಶವದಾಸ್ ಈ ಹಿಂದೆ ಸೈಬರ್ ಸೆಲ್‍ನಲ್ಲಿ ದೂರು ದಾಖಲಿಸಿದ್ದರು.
ಕೇಶವದಾಸ್ ಅವರ ಅತ್ತೆ ಲಲಿತಂಬಿಕಾ ಅವರನ್ನು ಕುಟ್ಟಂಕುಲಂಗರದಲ್ಲಿ ಸ್ಥಾನ ನೀಡಲು ಉದ್ದೇಶಿಸಲಾಗಿತ್ತಾದರೂ ಗೋಪಾಲಕೃಷ್ಣನ್ ಹಸ್ತಕ್ಷೇಪಗೈದು ಬದಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಲಲಿತಾಂಬಿಕಾ ಬಿಜೆಪಿಗೆ ರಾಜೀನಾಮೆಡಿದ್ದರು. ವಿಜೇತ ಯುಡಿಎಫ್ ಅಭ್ಯರ್ಥಿ ಸುರೇಶ್ ಅವರೊಂದಿಗೆ ಕೇಶವದಾಸ್ ಮತ್ತು ಅವರ ಕುಟುಂಬ ಕೇಕ್ ಕತ್ತರಿಸುವ ಫೆÇೀಟೋವನ್ನು ಗೋಪಾಲಕೃಷ್ಣನ್ ಪೆÇೀಸ್ಟ್ ಮಾಡಿದ್ದಾರೆ. ಕೇಶವದಾಸ್ ಅವರ ದೂರಿನ ಪ್ರಕಾರ, ಅವರ ಕುಟುಂಬದವರೊಂದಿಗೆ ಕೇಕ್ ಕತ್ತರಿಸಲಾಗಿದ್ದು ಆ ಪೋಟೋ ಬಳಸಿ ವದಂತಿಗಳನ್ನು ಹರಡಲು ದುರುಪಯೋಗಪಡಿಸಲಾಗಿದೆ ಎಂದು ದೂರಿದ್ದಾರೆ.





