HEALTH TIPS

ರಾಜ್ಯದಲ್ಲಿ ಕೋವಿಡ್ ಗಂಭೀರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ; ಕೋವಿಡ್ ಸೋಂಕಿತರ ಸಾವುಗಳು ಇತರ ಕಾಯಿಲೆಗಳಿಲ್ಲದವರಲ್ಲಿಯೂ ಹೆಚ್ಚು; ಜನವರಿ ನಿರ್ಣಾಯಕ!

               

       ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಗಂಭೀರ ಪರಿಣಾಮ ಉಂಟುಮಾಡುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದು ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯ ಸೂಚನೆಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇತರ ಕಾಯಿಲೆಗಳಿಲ್ಲದವರಲ್ಲಿ ಕೋವಿಡ್ ಸಂಬಂಧಿತ ಸಾವುಗಳು ಹೆಚ್ಚುತ್ತಿವೆ.

        ಕೋವಿಡ್ ತೀವ್ರ ನಿಗಾ ಅಗತ್ಯವಿರುವ ಜನರ ಸಂಖ್ಯೆ ಹೆಚ್ಚಾಗುವುದು ಬಹಳ ಗಂಭೀರ ಪರಿಸ್ಥಿತಿ. ತೀವ್ರವಾಗಿ ಅನಾರೋಗ್ಯ ಪೀಡಿತ ರೋಗಿಗಳ ಸಂಖ್ಯೆ ಹಿಂದಿನ ವಾರಗಳಿಗಿಂತ 15 ರಿಂದ 20 ರಷ್ಟು ಹೆಚ್ಚಾಗಿದೆ. ತೀವ್ರ ನಿಗಾ ಘಟಕದಲ್ಲಿ ಪ್ರಸ್ತುತ 827 ಜನರು ಮತ್ತು ವೆಂಟಿಲೇಟರ್‍ನಲ್ಲಿ 223 ಜನರಿದ್ದಾರೆ.

         ಚುನಾವಣೆಯ ನಂತರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಎಷ್ಟು ಹೆಚ್ಚು ಎಂದು ಕಂಡುಹಿಡಿಯಲು ಕನಿಷ್ಠ ಎರಡು ವಾರಗಳು ತೆಗೆದುಕೊಳ್ಳುತ್ತದೆ. ಅದರೊಂದಿಗೆ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಬಂದಿವೆ. 

       ನಿಬಂಧನೆಗಳಲ್ಲಿ ನೀಡಲಾಗಿರುವ ವಿನಾಯ್ತಿಗಳ ಬಳಿಕ ಸಾರ್ವಜನಿಕ ಸ್ಥಳಗಳು, ಅಂಗಡಿಗಳು ಮತ್ತು ಪ್ರವಾಸಿ ತಾಣಗಳಲ್ಲಿ ಭಾರಿ ಸಂಖ್ಯೆಯ ಜನ ಒಟ್ಟು ಸೇರತೊಡಗಿದ್ದಾರೆ. ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಕಂಡುಬಂದಿದೆ. ಇದರೊಂದಿಗೆ, ಜನವರಿ ತಿಂಗಳು ನಿರ್ಣಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

       ಇತರ ಕಾಯಿಲೆಗಳಿಲ್ಲದ ಜನರಲ್ಲಿ ಮತ್ತು ಯುವಜನರಲ್ಲಿಯೂ ಸೋಂಕು ಉಲ್ಬಣಗೊಳ್ಳುತ್ತಿದೆ. ಸಾವುಗಳೂ ಹೆಚ್ಚುತ್ತಿವೆ. ಇಲ್ಲಿಯವರೆಗೆ, 18 ರಿಂದ 60 ವರ್ಷದೊಳಗಿನ 606 ಜನರು ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 2,175 ಜನರು ಸಾವನ್ನಪ್ಪಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries