HEALTH TIPS

ಕೋವಿಡ್ ಮಾನದಂಡಗಳನ್ನು ಅನುಸರಿಸಿ ಶಬರಿಮಲೆಯಲ್ಲಿ ನೆರವೇರಿದ ಮಂಡಲ ಪೂಜೆ

      ಪತ್ತನಂತಿಟ್ಟು: ಕೋವಿಡ್ ಮಾನದಂಡಗಳನ್ನು ಅನುಸರಿಸಿ ಶಬರಿಮಲೆ ಸನ್ನಿಧಿಯಲ್ಲಿ ಶನಿವಾರ ಮಂಡಲ ಪೂಜೆ ನಡೆಸಲಾಯಿತು. ಪೂಜೆಗೆ ತಂತ್ರಿವರ್ಯ ಕಂಠಾರರ್ ಮಹೇಶ್ವರರು ನೇತೃತ್ವ ವಹಿಸಿದ್ದರು.

        ಸಮಾರಂಭಗಳ ಸಮಾರೋಪವು ಸಂಜೆ ದೀಪಪೂಜೆ ಹಾಗೂ ಶೋಭಾಯಾತ್ರೆಯೊಂದಿಗೆ ಈ ವರ್ಷದ ತೀರ್ಥಯಾತ್ರೆ ಕೊನೆಗೊಂಡಿತು.  ಬೆಳಿಗ್ಗೆ 11 ಗಂಟೆಗೆ ಯಾತ್ರಿಕರನ್ನು ಪಂಪಾದಲ್ಲಿ ತಡೆಹಿಡಿಯಲಾಗಿತ್ತಾದರೂ,ಸನ್ನಿಧಿಯಲ್ಲಿ ಸೇರಿಕೊಂಡಿದ್ದ ನಿಯಮಿತ ಭಕ್ತರ ಸಮ್ಮುಖ ಭಕ್ತಿಯಿಂದ ಸಂಪನ್ನಗೊಂಡಿತು. 

     ಬೆಳಿಗ್ಗೆ 11.20 ರಿಂದ ಮಧ್ಯಾಹ್ನ 12.40 ರ ನಡುವೆ ತಂತ್ರಿವರ್ಯ ಕಂಠಾರರ್ ಮಹೇಶ್ವರರು ಮತ್ತು ಮೇಲ್ಶಾಂತಿ ಜಯರಾಜ್ ಪೆÇತ್ತಿ ಅವರು ಪೂಜೆಗಳನ್ನು ನೆರವೇರಿಸಿದರು.  ಬೆಳಿಗ್ಗೆ 11.30 ಕ್ಕೆ ಕಲಶಾಭಿಷೇಕ ನಡೆಯಿತು. ಒಂದು ಗಂಟೆಗೆ ಪೂಜೆಯ ಬಳಿಕ ಚಿನ್ನದ ನಿಲುವಂಗಿಯೊಂದಿಗೆ ಮಂಡಲ ಪೂಜಾ ವಿಧಿಗಳು ನಡೆಯಿತು.

      ಈ ವರ್ಷದ ಮಂಡಲ ಅವಧಿ ಸಂಜೆ 5 ಗಂಟೆಗೆ ದೇವಾಲಯ ತೆರೆಯುವುದರೊಂದಿಗೆ ಮತ್ತು ರಾತ್ರಿ 9 ಗಂಟೆಗೆ ಹರಿವರಾಸನಂ ಜಪಿಸಿ ಮುಕ್ತಾಯಗೊಂಡಿತು. ವಿಶೇಷವಾಗಿ ಪೂಜೆಗಳು ಮತ್ತು ದೀಪರಾಧನ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries