HEALTH TIPS

ಕರಾವಳಿ ಭಾಗದ ಜನರ ಬೇಡಿಕೆ ಈಡೇರಿಸಿದ ಕೊಂಕಣ ರೈಲ್ವೆ

          ಮಂಗಳೂರು : ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆಗೆ ಕೊಂಕಣ ರೈಲ್ವೆ ಒಪ್ಪಿಗೆ ನೀಡಿದೆ. ಮಂಗಳೂರು-ಮುಂಬೈ ನಡುವೆ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಡಿಸೆಂಬರ್ 17ರಿಂದ ರೈಲು ಸಂಚಾರ ನಡೆಸಲಿದೆ.

            ಮಂಗಳೂರು ಸೆಂಟ್ರಲ್-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹಬ್ಬದ ವಿಶೇಷ ರೈಲು ಡಿಸೆಂಬರ್ 17 ರಿಂದ 31ರ ತನಕ ಸಂಚಾರ ನಡೆಸಲಿದೆ. ಲಾಕ್ ಡೌನ್ ಘೋಷಣೆ ಬಳಿಕ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.

           ಪ್ರತಿ ದಿನ ಮಂಗಳೂರು ಸೆಂಟ್ರಲ್-ಮುಂಬೈ ನಡುವೆ ಹಬ್ಬದ ವಿಶೇಷ ರೈಲನ್ನು ಓಡಿಸಲಾಗುತ್ತದೆ. ರೈಲು ನಂಬರ್ 02620/02619 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

           ವೇಳಾಪಟ್ಟಿ 02620 ಮಂಗಳೂರು-ಮುಂಬೈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 2.25ಕ್ಕೆ ಹೊರಡಲಿದೆ. ಸುರತ್ಕಲ್ (3.10), ಮೂಲ್ಕಿ, ಉಡುಪಿ (3.48), ಕುಂದಾಪುರ (4.18), ಬೈಂದೂರು, ಭಟ್ಕಳ, ಮರುಡೇಶ್ವರ, ಹೊನ್ನಾವರ, ಕುಮುಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂವ್, ಕುಡಾಲ್, ರತ್ನಗಿರಿ, ಖೇಡ್, ಮನಗಾಂವ್, ಪನ್ವೇಲ್, ಥಾಣೆ ಮೂಲಕ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.

          02619 ಸಂಖ್ಯೆಯ ರೈಲು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದೆ. ಬೈಂದೂರಿಗೆ ಮರುದಿನ ಮುಂಜಾನೆ 4.42ಕ್ಕೆ ಆಗಮಿಸಲಿದೆ. ಕುಂದಾಪುರ (5.10), ಉಡುಪಿ (5.45), ಸುರತ್ಕಲ್ (6.23) ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಗ್ಗೆ 7.30ಕ್ಕೆ ತಲುಪಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries