HEALTH TIPS

ಜಿಯೋ ಟವರ್‌ ಗಳಿಗೆ ವ್ಯಾಪಕ ಹಾನಿ: ʼನಮಗೆ ಕಾರ್ಪೊರೇಟ್‌ ಕೃಷಿಯಲ್ಲಿ ಆಸಕ್ತಿಯಿಲ್ಲʼ ಎಂದ ರಿಲಯನ್ಸ್‌

        ಹೊಸದಿಲ್ಲಿ,: ಕೇಂದ್ರದ ನೂತನ ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ಕಳೆದ ಹಲವಾರು ದಿನಗಳಿಂದ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಕಾನೂನುಗಳ ಜಾರಿಯ ಹಿಂದೆ ರಿಲಯನ್ಸ್ ಸಂಸ್ಥೆಯ ಪಾತ್ರವಿದೆ ಎಂದು ಆರೋಪಿಸಿ ರಾಜ್ಯದಲ್ಲಿನ ಹಲವಾರು ರಿಲಯನ್ಸ್ ಜಿಯೋ ಟವರುಗಳಿಗೆ ಹಾನಿಯೆಸಗಿ ತಮ್ಮ ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ ರಿಲಯನ್ಸ್ ಸಂಸ್ಥೆ ನ್ಯಾಯಾಲಯದ ಕದ ತಟ್ಟಿದೆಯಲ್ಲದೆ ತನ್ನ ಆಸ್ತಿಪಾಸ್ತಿಗಳ ರಕ್ಷಣೆಗೆ ಸರಕಾರದ ಹಸ್ತಕ್ಷೇಪವನ್ನು ಕೋರಿದೆ.

      ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಅಂಗ ಸಂಸ್ಥೆ ರಿಲಯನ್ಸ್ ಜಿಯೋ ಇನ್ಫೋಕಾಂ ಮೂಲಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ಮೊರೆ ಹೋಗಿದೆ. "ಕಿಡಿಗೇಡಿಗಳ ದಾಂಧಲೆಯ ಈ ಅಕ್ರಮ ಕೃತ್ಯಗಳನ್ನು ತಕ್ಷಣ ನಿಲ್ಲಿಸಲು" ಸರಕಾರದ ಹಸ್ತಕ್ಷೇಪವನ್ನು ಸಂಸ್ಥೆ ಕೋರಿದೆ.

       "ಈ ಹಿಂಸಾತ್ಮಕ ಕೃತ್ಯಗಳು ನಮ್ಮ ಸಾವಿರಾರು ಉದ್ಯೋಗಿಗಳ ಜೀವಗಳಿಗೆ ಅಪಾಯ ಸೃಷ್ಟಿಸಿವೆ ಹಾಗೂ ಎರಡೂ ರಾಜ್ಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಈ ಕೃತ್ಯವನ್ನು ಸ್ಥಾಪಿತ ಹಿತಾಸಕ್ತಿಗಳು ಹಾಗೂ ನಮ್ಮ ಉದ್ದಿಮೆ ಎದುರಾಳಿಗಳ ಕುಮ್ಮಕ್ಕಿನಿಂದ ಈ ದಾಂಧಲೆ ನಡೆಯುತ್ತಿದೆ," ಎಂದೂ ರಿಲಯನ್ಸ್ ಹೇಳಿಕೆಯೊಂದರಲ್ಲಿ ಆರೋಪಿಸಿದೆ.

       "ರೈತರ ಪ್ರತಿಭಟನೆಯ ಲಾಭ ಪಡೆದು ಈ ಸ್ಥಾಪಿತ ಹಿತಾಸಕ್ತಿಗಳು ರಿಲಯನ್ಸ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ ನಡೆಸುತ್ತಿವೆ, ಕೃಷಿ ಕಾನೂನುಗಳಿಗೂ ಕಂಪೆನಿಗೂ ಯಾವುದೇ ಸಂಬಂಧವಿಲ್ಲ ಹಾಗೂ ಕಂಪೆನಿಗೆ ಕಾರ್ಪೊರೇಟ್ ಅಥವಾ ಕಾಂಟ್ರಾಕ್ಟ್ ಕೃಷಿಯಲ್ಲಿ ಯಾವುದೇ ಆಸಕ್ತಿಯಿಲ್ಲ, ಹಿಂದೆಯೂ ಇದನ್ನು ನಡೆಸಿಲ್ಲ, ಮುಂದೆಯೂ ನಡೆಸುವ ಯೋಚನೆಯಿಲ್ಲ" ಎಂದೂ ಸಂಸ್ಥೆ ಸ್ಪಷ್ಟ ಪಡಿಸಿದೆ.

      "130 ಕೋಟಿ ಭಾರತೀಯರ ಅನ್ನದಾತರ ಮೇಲೆ ರಿಲಯನ್ಸ್ ಸಂಸ್ಥೆಗೆ ಅತೀವ ಗೌರವವಿದೆ," ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

      ಪಂಜಾಬ್ ರಾಜ್ಯದಲ್ಲಿರುವ ಜಿಯೋ ಸಂಸ್ಥೆಯ 9000 ಟವರುಗಳ ಪೈಕಿ 1,500 ಟವರುಗಳು ಹಾನಿಗೊಂಡಿವೆ. ಈಗಾಗಲೇ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇಂತಹ ಕೃತ್ಯಗಳನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries