HEALTH TIPS

ಆಶ್ರಯ ಆಶ್ರಮದಲ್ಲಿ ವೈದ್ಯಕೀಯ ಶಿಬಿರ

       ಬದಿಯಡ್ಕ: ಜನಮೈತ್ರಿ ಪೊಲೀಸ್ ಸಹಕಾರದೊಂದಿಗೆ ಟ್ರೂ ಲೈಫ್ ಕೇರ್ ಕಾಸರಗೋಡು ಇವರ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಶುಕ್ರವಾರ ಉಚಿತ ವೈದ್ಯಕೀಯ ಶಿಬಿರ ನಡೆಯಿತು.  ಡಾ. ಅನೂಪ್ ವಾರ್ಯರ್ ಆಶ್ರಮವಾಸಿಗಳ ತಪಾಸಣೆಯನ್ನು ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕ್ರೈಂ ದಾಖಲಾತಿ ಬ್ಯೂರೋ ಪ್ರಧಾನ ಅಧಿಕಾರಿ ಲತೀಶ್, ಎಎಸ್‍ಐ ಮುಹಮ್ಮದ್ ಶಾಫಿ, ಜನಮೈತ್ರಿ ಪೊಲೀಸ್ ವಿಭಾಗದ ಅನೂಪ್, ಮಹೇಶ್, ಟ್ರೂ ಲೈಫ್ ಕೇರ್ ಸಂಯೋಜಕ ಅಸ್ಕರ್ ಕೀಯೂರ್, ಅಫೀಫ್, ಆಶ್ರಮದ ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಕೃಷ್ಣ ಅಳಕ್ಕೆ ಪಾಲ್ಗೊಂಡಿದ್ದರು. 

      ಕೊರೋನಾ ಕಾಲಘಟ್ಟದಲ್ಲಿ ಆಸ್ಪತ್ರೆಗೆ ತೆರಳಲು ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ನಿಜವಾಗಿಯೂ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಆರೋಗ್ಯ ಇಲಾಖೆಯನ್ನು ಸಂಪರ್ಕಿಬೇಕು ಎಂಬ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ವಿವಿಧೆಡೆ ಹಮ್ಮಿಕೊಳ್ಳಲಾಗುವುದು ಎಂಬುದು ಜನಮೈತ್ರಿ ಪೊಲೀಸ್ ಹಾಗೂ ಟ್ರೂ ಲೈಫ್ ಕೇರ್‍ನ ಉದ್ದೇಶವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries