ಕಾಸರಗೋಡು: ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ 23ನೇ ವಾರ್ಷಿಕ ಸಮ್ಮೇಳನವು ಸೋಮವಾರ ಕೋಝಿಕ್ಕೋಡು ನಲಂದಾ ಸಭಾ ಭವನದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಕಾರ್ಯವಾಹ ಗೋಪಾಲನ್ ಕುಟ್ಟಿ ಮಾಸ್ತರ್ ದೀಪಬೆಳಗಿಸಿ ಉದ್ಘಾಟಿಸಿದರು. ಪ್ರಾಂತ್ಯ ಅಧ್ಯಕ್ಷ ಪುಷ್ಪಾಂಗಧನ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಭಾರತೀಯ ಮಜ್ದೂರ್ ಸಂಘ, ಭಾರತೀಯ ಜನತಾ ಪಕ್ಷದ ನೇತಾರರು ಭಾಗವಹಿಸಿದ್ದರು. ಕಾಸರಗೋಡು ಜಿಲ್ಲೆಯ ಪರವಾಗಿ ಪ್ರಾಂತ್ಯ ಉಪಾಧ್ಯಕ್ಷ ಶ್ರೀಧರ ಭಟ್, ಜಿಲ್ಲಾಧ್ಯಕ್ಷ ಈಶ್ವರ ರಾವ್, ಜಿಲ್ಲಾ ಕಾರ್ಯದರ್ಶಿ ಅರವಿಂದ ಕುಮಾರ್ ಹಾಗೂ ಕೋಶಾಧಿಕಾರಿ ಕೇಶವ ಪ್ರಸಾದ ಕುಳಮರ್ವ ಪಾಲ್ಗೊಂಡಿದ್ದರು.





