ಕುಂಬಳೆ: ಪೆರ್ಮುದೆ ಸಮೀಪದ ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಭೂತ ಬಲಿ ಉತ್ಸವ ಮತ್ತು ಜಟಾಧಾರಿ ದೈವದ ಮಹಿಮೆ ಫೆ. 25 ರಿಂದ 28 ರ ವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಕಾರ್ಯಕ್ರಮದ ಅಂಗವಾಗಿ ಫೆ.19 ರಂದು ಗೊನೆ ಮುಹೂರ್ತ ನೆರವೇರಿತು. ಫೆ. 25 ರಂದು ಗುರುವಾರ ರಾತ್ರಿ 9 ಕ್ಕೆ ಅತ್ತಾಳ, ಗಣಪತಿ ಪೂಜೆ ನಡೆಯಲಿದೆ. ಫೆ. 26. ರಂದು ಬೆಳಿಗ್ಗೆ 7.30 ಕ್ಕೆ ಗಣಪತಿ ಹೋಮ, 9.30ಕ್ಕೆ ಜಟಾಧಾರಿ ದೈವದ ಭಂಡಾರ ಬಂದು ಏರುವುದು, 9.45 ಕ್ಕೆ ನವಕಾಭಿಷೇಕ, 10ಕ್ಕೆ ನಾಗ ತಂಬಿಲ, 11 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ದೀಪಾರಾಧನೆ, ತಾಯಂಬಕ, ರಾತ್ರಿ 7.30 ಕ್ಕೆ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30ರಿಂದ ರಂಗಪೂಜೆ, ರಾತ್ರಿ 9.30 ರಿಂದ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ಫೆ. 27 ರಂದು ಬೆಳಿಗ್ಗೆ 10.ಕ್ಕೆ ಶ್ರೀದೇವರ ರಾಜಾಂಗಣ ಪ್ರವೇಶ ಮತ್ತು ಕಾಲಾವಧಿ ಪ್ರಸಾದವಿತರಣೆ, ಮಹಾಪೂಜೆ, ನಡೆಯಲಿದೆ. ರಾತ್ರಿ 7 ರಿಂದ ಕಂಬಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ, ರಾತ್ರಿ 9 ರಿಂದ ರಂಗಪೂಜೆ, ಪ್ರಸಾದ ವಿತರಣೆ, ನಡೆಯಲಿದೆ.28 ರಂದು ಬೆಳಿಗ್ಗೆ 3ರಿಂದ ಶ್ರೀ ಜಟಾಧಾರಿ ದೈವದ ಮಹಿಮೆ ನಡೆದು, ಬೆಳಿಗ್ಗೆ 8 ಕ್ಕೆ ಮಂತ್ರಾಕ್ಷತೆ, 8.30ಕ್ಕೆ ಭಂಡಾರ ಇಳಿಯುವುದರೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಸರಕಾರ Covid 19 ತಡೆಗಟ್ಟುವಿಕೆಯ ಬಗ್ಗೆ ಹೊರಡಿಸಿದ ಸುತ್ತೋಲೆಯಲ್ಲಿಯ ನಿಬಂಧನೆಗಳನ್ನು ಅನುಸರಿಸಿ ನಡೆಯಲಿರುವುದು.






