HEALTH TIPS

ಸುಬ್ಬಯ್ಯಕಟ್ಟೆ ತರಂಗಿಣಿ ಸ್ಪೋರ್ಟ್ಸ್ ಕ್ಲಬ್ 41 ನೇ ವಾರ್ಷಿಕೋತ್ಸವ ಮತ್ತು ಹೊಸ ಕಟ್ಟಡ ಉದ್ಘಾಟನೆ ಇಂದು

     
         ಕುಂಬಳೆ: ಸುಬ್ಬಯ್ಯಕಟ್ಟೆ  ತರಂಗಿಣಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ 41ನೇ ವಾರ್ಷಿಕೋತ್ಸವ ಮತ್ತು ಹೊಸದಾಗಿ ನಿರ್ಮಿಸಲಾದ ಕ್ಲಬ್ ಕಟ್ಟಡದ ಉದ್ಘಾಟನೆ ನಡೆಯಲಿದೆ ಇಂದು ಸಂಜೆ ನಡೆಯಲಿದೆ ಎಂದು ಕ್ಲಬ್ ಪದಾಧಿಕಾರಿಗಳು ಗುರುವಾರ ಸಂಜೆ ಕುಂಬಳೆ ಪ್ರೆಸ್ ಪೋರಂ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
          ಖ್ಯಾತ ಫುಟ್ಬಾಲ್ ಆಟಗಾರ ಮೊಹಮ್ಮದ್ ರಫಿ ಕ್ಲಬ್ ಕಟ್ಟಡವನ್ನು ಉದ್ಘಾಟಿಸುವರು.
          ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ರಾತ್ರಿ 8 ಗಂಟೆಗೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಸ್ ಪಾದೂರ್ ವಾರ್ಷಿಕೋತ್ಸವವನ್ನು ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಸದಸ್ಯ ಅಶೋಕ್ ಭಂಡಾರಿ ವಹಿಸಲಿದ್ದಾರೆ. ಪ್ಯೆವಳಿಕೆ ಗ್ರಾಮ  ಪಂಚಾಯತಿ ಅಧ್ಯಕ್ಷೆ ಜಯಂತಿ ಮತ್ತು ಮಾಜಿ ಶಾಸಕ ಕೆ.ವಿ. ಕುಂಞಿ ರಾಮನ್ , ಜಿಲ್ಲಾ ಪಂಚಾಯತಿ ಸದಸ್ಯರಾದ ಗೋಲ್ಡನ್ ರಹಮಾನ್, ಮುನೀರ್ ಹಾಜಿ, ವಿ.ಪಿ.ಪಿ ಮುಸ್ತಫಾ, ಸಿಎ ಸುಬೈರ್, ಬಿ.ಎ.ಕಾದರ್ ಮತ್ತು ಬಿ.ಎ.ಬಶೀರ್ ಉಪಸ್ಥಿತರಿರುವರು. 
        ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಬಿ.ಎ.ಕಾದರ್, ಕಾನ್ವೀನರ್ ಬಿ.ಎ.ಬಶೀರ್, ಕ್ಲಬ್ ಕಾರ್ಯದರ್ಶಿ ಅಬ್ದುಲ್ಲಾ, ವಾರ್ಡ್ ಸದಸ್ಯ ಅಶೋಕ್ ಭಂಡಾರಿ, ಉಪಾಧ್ಯಕ್ಷ ಮುಹಮ್ಮದ್, ಖಜಾಂಚಿ ಅಬ್ದುಲ್ ರಹಮಾನ್ ಮತ್ತು ಕೊಲ್ಲಿ ಪ್ರತಿನಿಧಿ ಜಾಫರ್ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries